ETV Bharat / state

ಗ್ರಾಮಸ್ಥರ ವಿರೋಧದ ನಡುವೆಯೂ ತಲೆ ಎತ್ತಿ ನಿಂತ ಮೊಬೈಲ್​ ಟವರ್​​​!

ಮೊಬೈಲ್ ಟವರ್ ತೆರವುಗೊಳಿಸುವಂತೆ ಆಗ್ರಹಿಸಿ ಭಕ್ತರಹಳ್ಳಿ ಗ್ರಾಮದ ದಲಿತರು ಅಂಬೇಡ್ಕರ್​​​ ಫೋಟೋ ಹಿಡಿದು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

author img

By

Published : Aug 27, 2019, 11:17 PM IST

Updated : Aug 27, 2019, 11:25 PM IST

ಮೊಬೈಲ್ ಟವರ್ ತೆರವುಗೊಳಿಸಲು ಗ್ರಾಮಸ್ಥರ ಆಗ್ರಹ

ಚಿಕ್ಕಬಳ್ಳಾಪುರ: ಮೊಬೈಲ್ ಟವರ್ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರ ನೆರವಿನೊಂದಿಗೆ ಟವರ್ ನಿರ್ಮಾಣ ಮಾಡಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೊಬೈಲ್ ಟವರ್ ತೆರವುಗೊಳಿಸುವಂತೆ ಆಗ್ರಹಿಸಿ ಭಕ್ತರಹಳ್ಳಿ ಗ್ರಾಮದ ದಲಿತರು ಅಂಬೇಡ್ಕರ್​​​ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ್ರು. ನಂತರ ಪೊಲೀಸರ ಸರ್ಪಗಾವಲಿನಲ್ಲಿ ಟವರ್ ನಿರ್ಮಾಣ ಮಾಡಲಾಯಿತು. ಕಳೆದ 5 ತಿಂಗಳುಗಳ ಹಿಂದೆ ಇದೇ ಟವರ್ ನಿರ್ಮಾಣವನ್ನು ತಡೆಯುವ ಸಲುವಾಗಿ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಈಗ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನು ಶಾಲೆಗಳು, ಆಸ್ಪತ್ರೆಗಳು ಹಾಗೂ ಜನವಸತಿ ಪ್ರದೇಶಗಳ ಸಮೀಪ ಟವರ್​ ನಿರ್ಮಿಸದಂತೆ ಸುಪ್ರೀಂ ಆದೇಶವಿದೆ. ಹಾಗಾಗಿ ಗ್ರಾಮಸ್ಥರು ಮತ್ತೆ ಪ್ರತಿಭಟನೆ ನಡೆಸಿ ಟವರ್​ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ಟವರ್ ತೆರವುಗೊಳಿಸಲು ಗ್ರಾಮಸ್ಥರ ಆಗ್ರಹ

ಇನ್ನು ಟವರ್ ನಿರ್ಮಾಣದ ಪಕ್ಕದಲ್ಲೇ ಶಾಲೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದ್ದು, ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ. ಮನೆಗಳ ಪಕ್ಕದಲ್ಲೇ ಮೊಬೈಲ್ ಟವರ್ ನಿರ್ಮಾಣವಾಗುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮೊಬೈಲ್ ಟವರ್ ಬಳಿ ಪ್ರತಿಭಟನೆಗೆ ಮುಂದಾಗಲು ಪೊಲೀಸರು ಬಿಡದ ಕಾರಣ ನಗರದ ತಾಲೂಕು ಕಚೇರಿ ಬಳಿ ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟನೆಗೆ ಮುಂದಾದ್ರು. ಮೊಬೈಲ್​​​ ಟವರ್​​ಅನ್ನು ಗ್ರಾಮದಿಂದ ದೂರ ಸ್ಥಳಾಂತರ ಮಾಡಬೇಕು ಎಂದು‌ ಇಲ್ಲಿನ ನಿವಾಸಿಗಳು ಪಟ್ಟು ಹಿಡಿದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೇಡ್​ 2 ತಹಶೀಲ್ದಾರ್​ ಹನುಮಂತ ರಾವ್​, ಟವರ್​ ನಿರ್ಮಾಣಕ್ಕೆ ಮಧ್ಯಂತರವಾಗಿ ಯಾವುದೇ ಅಡಚಣೆ ಮಾಡಬಾರದು. ಸೂಕ್ತ ದಾಖಲೆಗಳಿದ್ದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ನ್ಯಾಯಾಲಯ ಆದೇಶ ಮಾಡಿದೆ. ಅದರಂತೆ ಟವರ್​ ನಿರ್ಮಾಣ ಕಾರ್ಯ ಮಾಡಲಾಗಿದೆ ಎಂದಿದ್ದಾರೆ.

Intro:ಮೊಬೈಲ್ ಟವರ್ ತೆರುವುಗೊಳಿಸುವಂತೆ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು ಪೊಲೀಸರ ನೆರವಿನೊಂದಿಗೆ ಟವರ್ ನಿರ್ಮಾಣ ಮಾಡಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.

Body:ಒಂದು ಕಡೆ ಅಂಬೇಡ್ಕರ್ ಪೋಟೋ ಹಿಡಿದು ಗ್ರಾಮಸ್ಥರ ಪ್ರತಿಭಟನೆ ಮತ್ತೊಂದು ಕಡೆ ಪೊಲೀಸರ ಸರ್ಪಗಾವಲು. ಸದ್ಯ ಈ ದೃಶ್ಯಗಳನ್ನು‌ ನೋಡಿದರೆ ಗ್ರಾಮದಲ್ಲಿ ಯಾರೋ ನಕ್ಸಲ್ ರು ಸುಳಿದಿದ್ದಾರೆನೋ ಎಂಬ ಅನುಮಾನ‌ ಬರುವುದಂತು ಗ್ಯಾರೆಂಟಿ.ಹೌದು ಮೊಬೈಲ್ ಟವರ್ ನಿರ್ಮಾಣ ಹಾಗೂ ತೆರವುಗೊಳಿಸುವಂತೆ ಗ್ರಾಮದ ದಲಿತರು ನಡೆಸುತ್ತಿರುವ ಪ್ರತಿಭಟನೆಗೆ ಪೊಲೀಸರ ಸರ್ಪಗಾವಲಿನಲ್ಲಿ ಟಬರ್ ನಿರ್ಮಾಣವನ್ನು ಮಾಡುತ್ತಿರುವ ದೃಶ್ಯಗಳು ಈ ಗ್ರಾಮದಲ್ಲಿ ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ.

ಹೌದು ಕಳೆದ 5 ತಿಂಗಳುಗಳ ಹಿಂದೆ ಇದೇ ಟವರ್ ನಿರ್ಮಾಣವನ್ನು ತಡೆಯುವ ಸಲುವಾಗೀ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ ಗ್ರಾಮದ ದಲಿತರು ಈಗ ಸುಪ್ರೀಂ ಕೊರ್ಟ್ ತೀರ್ಪಿನ ಬಳಿಕ ಮತ್ತೇ ಪ್ರತಿಭಟನೆಗೆ ಮುಂದಾಗಿದ್ದಾರೆ.

5 ತಿಂಗಳಿನಿಂದಲೂ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ಈ ಗ್ರಾಮದಲ್ಲಿ ಸರ್ವೆ ಸಾಮಾನ್ಯವಾಗಿ ಬಿಟ್ಟಿವೆ.ಒಂದು ಕಡೆ ಸುಪ್ರೀ ಕೋರ್ಟ್ ಟವರ್ ನಿರ್ಮಾಣಕ್ಕೆ ತಡೆಯಾಜ್ಞೆ ಹೊರಡಿಸಿದರು ಇತ್ತ ತಹಶಿಲ್ದಾರ್ ಸಾಹೇಬ್ರು ಟವರ್ ನಿರ್ಮಾಣ ಮಾಡಲು ಆದೇಶ ಹೊರಡಿಸಿದ್ದಾರೆ.ಇದರಿಂದ ಬೇಸತ್ತ ಭಕ್ತರಹಳ್ಳಿ ಗ್ರಾಮದ ದಲಿತ ನಿವಾಸಿಗಳು ಮತ್ತೇ ಪ್ರತಿಭಟನೆಗೆ ಮುಂದಾಗಿದ್ದಾರೆ.

ಇನ್ನೂ ಟವರ್ ನಿರ್ಮಾಣದ ಪಕ್ಕದಲ್ಲೇ ಶಾಲೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದ್ದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದ್ದು ಸಾಕಷ್ಟು ತೊಂದರೆಯಾಗಲಿದೆ ಇನ್ನೂ ಮನೆಗಳ ಪಕ್ಕದಲ್ಲೇ ಮೊಬೈಲ್ ಟವರ್ ನಿರ್ಮಾಣವಾಗುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸ ಕ್ಕೂ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನೂ ಮೊಬೈಲ್ ಟವರ್ ಬಳಿ ಪ್ರತಿಭಟನೆಗೆ ಮುಂದಾಗಲು ಪೊಲೀಸರು ಬಿಡದ ಕಾರಣ ನಗರದ ತಾಲೂಕು ಕಛೇರಿ ಬಳಿ ಅಂಬೇಡ್ಕರ್ ಪೋಟೋ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದು ನಮಗೆ ಟವರ್ ಗ್ರಾಮದಿಂದ ದೂರ ಸ್ಥಳಾಂತರ ಮಾಡಿದರೇ ಸಾಕು ಎಂದು‌ ದಲಿತ‌ ನಿವಾಸಿಗಳು ಪಟ್ಟು ಹಿಡಿದಿದ್ದಾರೆ.

Conclusion:ರೂಪ ವೆಂಕಟೇಶ್
ಕನಕರಾಜ್

(ಗ್ರೇಡ್ 2 ತಾಹಶೀಲ್ದಾರ್) ಹನುಮಂತ್ ರಾವ್

Last Updated : Aug 27, 2019, 11:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.