ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಡ ಕೂಲಿ ಕಾರ್ಮಿಕರಿಗೆ ಯುವ ಸಮಾಜ ಸೇವಕ ಅಶೋಕ್ ತರಕಾರಿಗಳನ್ನು ವಿತರಿಸಿದರು.
ಪಟ್ಟಣದ 2 ನೇ ವಾರ್ಡ್ನ 450 ಕುಟುಂಬಗಳಿಗೆ ತರಕಾರಿಯನ್ನು ಹಂಚಿಕೆ ಮಾಡಿದರು. ತರಕಾರಿ ವಿತರಣೆ ಕಾರ್ಯಕ್ರಮಕ್ಕೆ ಪುರಸಭೆ ಮುಖ್ಯಾಧಿಕಾರಿ ಪಂಕಜಾ ರೆಡ್ಡಿ ಚಾಲನೆ ನೀಡಿದರು.
ಲಾಕ್ ಡೌನ್ ನಿಂದ ಜನರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಯಲ್ಲಿ ಕಾಸಿಲ್ಲದೆ ಊಟಕ್ಕೂ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಅರಿತು ಅಶೋಕ್ ತಮ್ಮ ಕೈಲಾದಷ್ಷು ಸಹಾಯ ಮಾಡಿರುವುದು ಅಭಿನಂದನೀಯ ಎಂದು ಪುರಸಭೆ ಮುಖ್ಯಾಧಿಕಾರಿ ಪಂಕಜಾ ರೆಡ್ಡಿ ಹೇಳಿದರು.