ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೆ ಮೂವರಲ್ಲಿ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 158 ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿರುವ ವಲಸೆ ಕಾರ್ಮಿಕರಲ್ಲಿ ಇಬ್ಚರಿಗೆ ಮತ್ತು ತಮಿಳು ನಾಡಿನ ಒಬ್ಬರಿಗೆ ಕೊರೊನಾ ಧೃಡಪಟ್ಟಿದೆ.
ರೋಗಿ ಸಂಖ್ಯೆ 8082ರ 25 ವರ್ಷದ ತಮಿಳುನಾಡಿನ ಯುವಕನಿಗೆ, ಮಹಾರಾಷ್ಟ್ರದಿಂದ ಬಂದ ರೋಗಿ ಸಂಖ್ಯೆ 8083ರ 15 ವರ್ಷದ ಬಾಲಕ ಮತ್ತು ರೋಗಿ ಸಂಖ್ಯೆ 8084ರ 27ವರ್ಷದ ಯುವಕನಲ್ಲಿ ಕೊರೊನಾ ಕಾಣಿಸಿಕೊಂಡಿದೆ.
158 ಜನ ಸೋಂಕಿತರಲ್ಲಿ ಮೂವರ ಸಾವನ್ನಪ್ಪಿದ್ದಾರೆ. 147 ಜನ ಸಂಪೂರ್ಣ ಗುಣಮುಖರಾಗಿದ್ದು, 8 ಜನ ಸಕ್ರಿಯ ಪ್ರಕರಣಗಳಿವೆ. ಇವರೆಲ್ಲರಿಗೂ ಚಿಕ್ಕಬಳ್ಳಾಪುರ ಹಳೆ ಜಿಲ್ಲಾಸ್ಪತ್ರೆಯ ಐಸೋಲೇಷನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.