ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು ಮೂವರಿಗೆ ಕೊರೊನಾ ಸೊಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ.
ಚಿಂತಾಮಣಿಯ 50 ವರ್ಷದ ಪುರುಷ, 18 ವರ್ಷದ ಯುವಕ ಹಾಗೂ ಪಟ್ಟಣದ 45 ವರ್ಷದ ವ್ಯಕ್ತಿಗೆ ಸೋಂಕು ಧೃಡಪಟ್ಟಿದೆ. ಚಿಂತಾಮಣಿಯ 50 ವರ್ಷದ ಪುರುಷನಿಗೆ ಪಿ-9911 ಸೋಂಕಿತನ ಸಂಪರ್ಕದಿಂದ ಸೋಂಕು ಹರಡಿದ್ದು, ಇನ್ನುಳಿದ ಇಬ್ಬರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಹಿನ್ನೆಲೆಯಿದೆ.
ಸದ್ಯ ಸೋಂಕಿತರ ಮನೆ ಹಾಗೂ ಸುತ್ತಮುತ್ತಲಿನ ಮನೆಗಳನ್ನು ಸ್ಯಾನಿಟಸ್ ಮಾಡಿ ಸೀಲ್ ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 233 ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದ್ದು, 53 ಸಕ್ರಿಯ ಪ್ರಕರಣಗಳಿಗೆ ಜಿಲ್ಲೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರೆದಿದೆ.