ಚಿಕ್ಕಬಳ್ಳಾಪುರ: ಬಕ್ರೀದ್ ಹಬ್ಬದ ಹಿನ್ನೆಲೆ ಬೆಂಗಳೂರಿಗೆ ಪರವಾನಗಿ ಇಲ್ಲದೇ ಸಾಗಿಸುತ್ತಿದ್ದ 15 ನಾಟಿ ಎತ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಕಂಟೈನರ್ ಅನ್ನು ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರಟಹಳ್ಳಿ ಕ್ರಾಸ್ ಬಳಿ ತಡೆದಿದ್ದಾರೆ.
ಬಂಧಿತರನ್ನು ಹೊಸಕೋಟೆಯ ತಮಾಸನಹಳ್ಳಿಯ ಫಜೀಲ್ ಷರೀಫ್ (32) ಅದೇ ಗ್ರಾಮದ ಅರ್ಬಾಜ್ ಬೇಗ್(23) ಹಾಗೂ ವಿಜಯಪುರದ ಭರತ್ ಕುಮಾರ್ (20) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬಕ್ರೀದ್ ಹಬ್ಬದ ಆಂಧ್ರ ಪ್ರದೇಶದ ಕದಿರಿ ಎತ್ತುಗಳ ಸಂತೆಯಿಂದ ಒಂದು ಎತ್ತುವಿಗೆ 25 ಸಾವಿರದಂತೆ 3,75,000 ಕೊಟ್ಟು ಖರೀದಿಸಿದ್ದರು.
ಆಂಧ್ರ ಮೂಲದ ಮದನಪಲ್ಲಿ ಮಾರ್ಗದ ಮೂಲಕ ಬೆಂಗಳೂರು ರಸ್ತೆಯಲ್ಲಿ ಬರುವ ವೇಳೆ ಗುಸ್ತಿನಲ್ಲಿದ್ದ ಚಿಂತಾಮಣಿ ಗ್ರಾಮಾಂತರ ಪೊಲೀಸರು ಕೆಎ 40 ಎ 1621 ವಾಹನವನ್ನು ನಿಲ್ಲಿಸಿ ಪರಿಶೀಲಿಸಿದ್ದಾರೆ. ಈ ವೇಳೆ, ಎತ್ತುಗಳು ಇರುವುದು ತಿಳಿದು ಬಂದಿದೆ. ಪೊಲೀಸರು ಮೂವರನ್ನು ಬಂಧಿಸಿದ್ದು ವಾಹನ ಮತ್ತು ಎತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಮೈಸೂರು : ಕತ್ತೆ ಹಂದಿಗಳ ಜೊತೆ ಮೆರವಣಿಗೆ ಹೊರಟ ಕಾಂಗ್ರೆಸ್ ವಕ್ತಾರ