ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮದಲ್ಲಿ ರಾತ್ರಿ ಸಮಯದಲ್ಲಿ ಕೊಳವೆ ಬಾವಿಗಳ ಹತ್ತಿರ ಇರುವ ಕೇಬಲ್ನ್ನು ಕಳ್ಳರು ಕದ್ದಿರುವ ಘಟನೆ ನಡೆದಿದೆ.
ಪರಶುರಾಮನಹಳ್ಳಿಯ ಶಿವಪ್ಪ ಎಂಬುವರ ಎರಡು ಕೊಳವೆ ಬಾವಿ ಹತ್ತಿರ 150 ಮೀಟರ್ ಕೇಬಲ್, ಹಾಗೂ ರಾಮಚಂದ್ರಪ್ಪರವರ ಕೊಳವೆ ಬಾವಿ ಹತ್ತಿರ 50 ಮೀಟರ್, ಜಯಮ್ಮ ಎಂಬುವವರ ಕೊಳವೆ ಬಾವಿ ಹತ್ತಿರ 50 ಮೀಟರ್ ಕಳವಾಗಿದೆ.
ಇನ್ನು, ಊರಿಗೆ ಸೇರಿದ ವಾಟರ್ ಸಪ್ಲೆ ಕೊಳವೆ ಬಾವಿಯ ಹತ್ತಿರ 100 ಕ್ಕೂ ಹೆಚ್ಚು ಮೀಟರ್ ಕೇಬಲ್ ಕಳವಾಗಿದೆ. ಕಳ್ಳರು ರಾತ್ರಿ ಸಮಯದಲ್ಲಿ ಮಾತ್ರ ಅವರ ಕೈ ಚಳಕ ತೋರಿಸುತ್ತಿದ್ದು, ರೈತರು ರಾತ್ರಿ ಸಮಯದಲ್ಲೂ ಕೊಳವೆ ಬಾವಿಗಳ ಹತ್ತಿರ ಕಾದು ಕೂರುವ ಪರಿಸ್ಥಿತಿ ಎದುರಾಗಿದೆ.