ETV Bharat / state

ಬೀದಿ ನಾಯಿಗಳ ದಾಳಿಗೆ 10 ಕುರಿಗಳು ಬಲಿ - kannadanews

ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಕಡೆ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಸುಮಾರು 10 ಕುರಿಗಳನ್ನು ಬಲಿ ಪಡೆದಿವೆ.

ಬೀದಿ ನಾಯಿಗಳ ದಾಳಿಗೆ 10 ಕುರಿಗಳು ಬಲಿ
author img

By

Published : Jun 19, 2019, 2:50 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಾಳಮಾಚನಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ಹಿಂಡು ಮಂಗಳವಾರ ತಡರಾತ್ರಿ ಸುಮಾರು 10 ಕುರಿಗಳನ್ನು ಸಾಯಿಸಿವೆ.

ರೈತ ದೋಬಿ ಮುನಿಯಪ್ಪ ಎಂಬುವವರಿಗೆ ಸೇರಿದ ಈ 10 ಕುರಿಗಳ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿವೆ. ಮಂಗಳವಾರ ತಡರಾತ್ರಿ ಮುನಿಯಪ್ಪ ಮನೆಯ ಪಕ್ಕದ ಶೆಡ್​ನಲ್ಲಿ ಕುರಿಗಳು ತಂಗಿದ್ದವು. ಈ ವೇಳೆ ಬೀದಿ ನಾಯಿಗಳು ಕುರಿಗಳ ಮೇಲೆ ದಾಳಿ ನಡೆಸಿ ಕಚ್ಚಿ ಕಚ್ಚಿ ಸುಮಾರು 10 ಕುರಿಗಳನ್ನು ಸಾಯಿಸಿವೆ. ಗ್ರಾಮದಲ್ಲಿ ನಾಯಿಗಳು ಹೀಗೆ ಕುರಿ ಮತ್ತು ಮೇಕೆಗಳ ಮೇಲೆ ದಾಳಿ ನಡೆಸುತ್ತಿದ್ದರೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಬೀದಿ ನಾಯಿಗಳನ್ನು ಹಿಡಿಯುತ್ತಿಲ್ಲ.

ಬೀದಿ ನಾಯಿಗಳ ದಾಳಿಗೆ 10 ಕುರಿಗಳು ಬಲಿ

ಕುರಿ, ಮೇಕೆ ಸಾಕಾಣಿಕೆಯಿಂದಲೇ ಜೀವನ ನಡೆಸುತ್ತಿರುವ ರೈತರು ಇದೀಗ ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸದಸ್ಯ ಭೈರೇಗೌಡ ಆಗ್ರಹಿಸಿದ್ದಾರೆ.

Intro:ಶಿಡ್ಲಘಟ್ಟ ತಾಲ್ಲೂಕಿನ ಮಾಳಮಾಚನಹಳ್ಳಿ ಗ್ರಾಮದಲ್ಲಿ ಬೀದಿನಾಯಿಗಳು ಹಿಂಡು ಮಂಗಳವಾರ ತಡರಾತ್ರಿ ಸುಮಾರು 10 ಕುರಿ­ಗಳನ್ನು ಸಾಯಿಸಿವೆ. ರೈತರಾದ ದೋಬಿ ಮುನಿಯಪ್ಪ ಸೇರಿದ ಈ 10 ಕುರಿಗಳು ನಾಯಿಗಳ ಹಿಂಡು ದಾಳಿ ನಡೆಸಿದ್ದು ಸಾವು ಗೀಡಗಿವೆ.Body:ಮಂಗಳವಾರ ತಡ ರಾತ್ರಿ ರೈತ ದೋಬಿ ಮುನಿಯಪ್ಪ ತಮ್ಮ ಮನೆಯ ಪಕ್ಕದ ಶೆಡ್ ನಲ್ಲಿ ಕುರಿಗಳು ತಂಗಿದ್ದವು. ಈ ವೇಳೆ ಬೀದಿ ನಾಯಿಗಳು ಕುರಿಗಳ ಮೇಲೆ ದಾಳಿ ನಡೆಸಿ ಕಚ್ಚಿ ಕಚ್ಚಿ ಸುಮಾರು 10 ಕುರಿಗಳನ್ನು ಸಾವಿಸಿವೆ.

ಗ್ರಾಮದಲ್ಲಿ ನಾಯಿಗಳು ಹೀಗೆ ಕುರಿ ಮತ್ತು ಮೇಕೆಗಳ ಮೇಲೆ ದಾಳಿ ನಡೆ­ಸುತ್ತಿ­ದ್ದರೂ ಗ್ರಾಮ ಪಂಚಾಯ್ತಿ ಅಧಿ­ಕಾರಿ­ಗಳು ಬೀದಿನಾಯಿಗಳನ್ನು ಹಿಡಿಯು­ತ್ತಿಲ್ಲ. ಕುರಿ, ಮೇಕೆ ಸಾಕಾಣಿಕೆ­ಯಿಂದಲೇ ಜೀವನ ನಡೆಸುತ್ತಿರುವ ರೈತರು ಇದೀಗ ತೀವ್ರ ನಷ್ಟಕ್ಕೆ ಒಳಗಾಗಿ­ದ್ದಾರೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಹಾಗೂ ಗ್ರಾಮಪಂಚಾಯತಿ ಸದಸ್ಯ ಬೈರೇಗೌಡ ಆಗ್ರಹಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.