ಚಿಕ್ಕಬಳ್ಳಾಪುರ: ಶಾಲೆಯನ್ನು ಯಾವ ರೀತಿ ಸ್ವಚ್ಛಗೊಳಿಸಬೇಕು. ಪ್ರತಿನಿತ್ಯ ಶಾಲೆಗೆ ಹೇಗೆ ಬರಬೇಕು ಎಂದು ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಬೂರು ಸರ್ಕಾರಿ ಶಾಲೆಯ ಮಕ್ಕಳಿಗೆ ತಹಶೀಲ್ದಾರ್ ಪಾಠ ಮಾಡಿದ್ರು.
ದಿಢೀರನೇ ಶಾಲೆಗೆ ಭೇಟಿ ನೀಡಿದ ಚಿಂತಾಮಣಿ ತಹಶೀಲ್ದಾರ್ ವಿಶ್ವನಾಥ್ ತಾಲೂಕಿನ ಕುರುಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠವನ್ನು ಹೇಳಿ ಶಾಲೆಯೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಶಾಲೆಯಲ್ಲಿನ ಮಕ್ಕಳೊಂದಿಗೆ ಕೆಲ ಕಾಲ ಮಾತನಾಡಿದ ಅವರು, ವಿದ್ಯಾಭ್ಯಾಸ ಬಗ್ಗೆ ಚರ್ಚೆ ನಡೆಸಿ, ಶಾಲೆಯ ವ್ಯವಸ್ಥೆಗಳನ್ನು ವೀಕ್ಷಣೆ ಮಾಡಿ ಮಕ್ಕಳಿಗೆ ವಿತರಿಸುವ ಬಿಸಿಯೂಟ ಮತ್ತು ಸಮವಸ್ತ್ರ, ಶೂ ಮತ್ತು ಹಾಲನ್ನು ವಿತರಣೆ ಮಾಡುವ ಬಗ್ಗೆ ಶಾಲೆಯ ಮುಖ್ಯೋಪಾಧ್ಯಯರ ಜೊತೆ ಚರ್ಚೆ ನಡೆಸಿದ್ರು. ನಂತರ ಪರಿಶೀಲನೆ ನಡೆಸಿ ಮಕ್ಕಳ ವಿಧ್ಯಾಭ್ಯಸಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮಗಳನ್ನು ತಗೆದುಕೊಳ್ಳುವಂತೆ ಎಚ್ಚರಿಕೆಯನ್ನು ನೀಡಿದ್ರು.
ಇನ್ನೂ ಮಕ್ಕಳೊಂದಿಗೆ ಕೆಲಕಾಲ ಮಾತುಕತೆ ನಡೆಸಿದ ತಹಶೀಲ್ದಾರ್ ಸರ್ಕಾರಿ ಶಾಲೆಯ ಮಕ್ಕಳ ಚುರುಕುತನವನ್ನು ನೋಡಿ ಭೇಷ್ ಎಂದಿದ್ದಾರೆ. ಈ ವೇಳೆ ಕೈವಾರ ಹೋಬಳಿಯ ಉಪ ತಹಶೀಲ್ದಾರ್ ಮೋಹನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಶಶಿಕಲಾ ಸೇರಿ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.