ಚಿಕ್ಕಬಳ್ಳಾಪುರ : ಭಾರತೀಯ ಯೋಧರು ದೇಶದ ಪಾಲಿಗೆ ದೇವರು ಅಂತಾರೆ. ಹಗಲು ರಾತ್ರ ಎನ್ನದೆ ರಾಷ್ಟ್ರಸೇವೆಗೆ ತಮ್ಮ ಜೀವನವನ್ನೆ ಮುಡಿಪಾಗಿಡುತ್ತಾರೆ. ಆದರೆ ಶಿಡ್ಲಘಟ್ಟ ನಗರದ ಯೋಧನಿಗೆ ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ್ದೇ ದೊಡ್ಡ ತಪ್ಪಾದಂತಾಗಿದೆ.
ಮಂಜುನಾಥ್ ಎಂಬ ಯೋಧ 2002 ರಲ್ಲಿ ಭಾರತೀಯ ಸೇನೆ ಸೇರಿ ಗಡಿಯಲ್ಲಿ ಸೇವೆ ಸಲ್ಲಿಸಿ 2017 ರಲ್ಲಿ ನಿವೃತ್ತಿ ಪಡೆದಿದ್ದಾರೆ. 2007 ರಲ್ಲಿ ನಡೆದ ಅಪಘಾತದಲ್ಲಿ ತನ್ನ ಇಬ್ಬರು ಸ್ನೇಹಿತರು ಕಣ್ಣ ಮುಂದೆ ಸಾವನ್ನಪ್ಪಿದರು. ಆ ಅಪಘಾತದಲ್ಲಿ ಮಂಜುನಾಥ್ ರವರ ಕೈ ಮುರಿದಿದೆ. ಆದರೂ ಛಲ ಬಿಡದ ಯೋಧ ಮಂಜುನಾಥ ದೇಶ ಸೇವೆ ಸಲ್ಲಿಸಿದ್ದಾರೆ.
ಸದ್ಯ ರಾಷ್ಟ್ರ ರಕ್ಷಣೆಗೆ ಜೀವ ತೆತ್ತ ಸೈನಿಕನಿಗೆ ಅಧಿಕಾರಿಗಳು ಅಪಮಾನ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳ ಹಿಂದೆ 4 ಎಕರೆ ಸರ್ಕಾರಿ ಜಮೀನನ್ನು ಯೋಧನಿಗೆ ನೀಡಲು ಸರ್ಕಾರ ನಿರ್ಧರಿಸಿತ್ತು. ಆದರೆ ಇತ್ತ ತಹಸೀಲ್ದಾರರು ಮಾತ್ರ ನಿವೃತ್ತ ಯೋಧನಿಗೆ ಸ್ಥಳ ನೀಡುಲು ಹಿಂದೇಟು ಹಾಕುತ್ತಿದ್ದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಜಿಲ್ಲಾಧಿಕಾರಿಗಳು ಶಾಸಕರು ಸೇರಿದಂತೆ ಸಂಸದರೂ ಆದಷ್ಟು ಬೇಗ ಸ್ಥಳವನ್ನು ನೀಡಲು ಸೂಚನೆ ನೀಡಿದರೂ ಕೂಡಾ ದಂಡಾಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲವಂತೆ. ಕಳೆದ 15 ತಿಂಗಳಿನಿಂದಲೂ ನಿಗಧಿ ಪಡಿಸಿರುವ ಸ್ಥಳಕ್ಕಾಗಿ ಹೋರಾಟ ನಡೆಸುತ್ತಿದ್ದರೆ ಈಗ ಮತ್ತೊಂದು ಸ್ಥಳವನ್ನು ನೀಡುವುದಾಗಿ ಹೇಳುತ್ತಿದ್ದಾರಂತೆ.