ETV Bharat / state

ಕೊರೊನಾ ಬಿಕ್ಕಟ್ಟಿನಲ್ಲಿ ಸಚಿವ ಸುಧಾಕರ್ ಸಾವಿರಾರು ಕೋಟಿ ರೂ. ಲೂಟಿ ಮಾಡಿದ್ದಾರೆ: ಶಿವಶಂಕರ್ ರೆಡ್ಡಿ

ಡಾ. ಕೆ ಸುಧಾಕರ್​ ಲಸಿಕೆ ಹಂಚಿಕೆ ವಿಚಾರದಲ್ಲಿ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ ಎಂದು ಮಾಜಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಆರೋಪಿಸಿದ್ದಾರೆ.

Shivshankar reddy aligation against  ex minister dr k sudhakar
ಸಚಿವ ಸುಧಾಕರ್ ವಿರುದ್ಧ ಆರೋಪ
author img

By

Published : Aug 1, 2021, 6:19 PM IST

Updated : Aug 2, 2021, 9:50 AM IST

ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರಾಗಿದ್ದ ಡಾ. ಕೆ ಸುಧಾಕರ್​ ಲಸಿಕೆ ಹಂಚಿಕೆ ವಿಚಾರದಲ್ಲಿ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ ಎಂದು ಮಾಜಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ತಾಲೂಕಿನ ಕಾಚಮಾಚೇನಹಳ್ಳಿಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮಪಂಚಾಯತ್​ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಶಿವಶಂಕರ್ ರೆಡ್ಡಿ ಮಾತನಾಡಿದ್ರು. ಸಭೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ಹಾಗೂ ಸುಧಾಕರ್​ ವಿರುದ್ಧ ಕಿಡಿಕಾರಿದ್ರು.

ಬಡವರ ಹೊಟ್ಟೆ ಮೇಲೆ ದಾಳಿ:

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಜಾರಿಗೆ ತಂದಿದ್ದಾರೆ. ಆದರೆ ವಯಸ್ಸಾದ ಹಸುಗಳನ್ನು ಏನು ಮಾಡುವುದು? ಅವುಗಳಿಗೆ ನೀವು ಮೇವು ಹಾಕ್ತೀರಾ? ಮುದಿ ಹಸುಗಳನ್ನು ಗೋಶಾಲೆಗೆ ಕಳುಹಿಸಿ ಅಂತಾರೇ ಎಷ್ಟು ಹಸುಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇವುಗಳನ್ನು ಏನು ಮಾಡಬೇಕು? ಬಡವರ ಹೊಟ್ಟೆ ಮೇಲೆ ದಾಳಿ ಮಾಡುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಪಕ್ಷದವರು ಬಣ್ಣದ ಟವಲ್ ಹಾಕಿಕೊಂಡು ಹಿಂದೂ ಧರ್ಮ ನಮ್ಮದು ಅಂತಾರೆ. ಹಿಂದೂ ಧರ್ಮವನ್ನು ಬಿಜೆಪಿ ಪಕ್ಷ ಗುತ್ತಿಗೆ ತೆಗೆದುಕೊಂಡಂತೆ ಆಟವಾಡುತ್ತಿದ್ದಾರೆಂದು ಕಿಡಿಕಾರಿದ್ರು.

ಮಾಜಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಆರೋಪ

ಮೆಡಿಕಲ್ ಸೀಟ್‍ಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ:

ಕೊರೊನಾ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಲೂಟಿ ಮಾಡಿದ್ದಾರೆ. ಮೆಡಿಕಲ್ ಸೀಟ್‍ಗಳ ಹಂಚಿಕೆಯಲ್ಲಿ ಹಣವನ್ನು ಫಿಕ್ಸ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಒಂದೊಂದು ಮೆಡಿಕಲ್ ಕಾಲೇಜಿನಿಂದ ಇಷ್ಟೊಂದು ಪ್ಯಾಕೇಜ್ ಅಂತಾ ವಸೂಲಿ ಮಾಡಿದ್ರು. ವಿಧಾನಸಭೆಯಲ್ಲಿ ಮೂರುವರೆ ಸಾವಿರ ಕೋಟಿ ಖರ್ಚಾಗಿದೆ ಎಂದು ಹೇಳಿದ್ರು. ಆದರೆ ನಂತರ ವಿಧಾನಸೌಧದಲ್ಲೇ ಅಷ್ಟೊಂದು ಖರ್ಚಾಗಿಲ್ಲಾ ಎಂದು ಒಪ್ಪಿಕೊಂಡ್ರು. ಹಾಗಾದ್ರೆ ಉಳಿದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ಯಡಿಯೂರಪ್ಪನವರು ಅಧಿಕಾರದಿಂದ ಇಳಿಯಲು ಕಾರಣ ಅವರ ಮಗ:

ಯಡಿಯೂರಪ್ಪನವರು ಅಧಿಕಾರದಿಂದ ಇಳಿಯಲು ಕಾರಣ ಅವರ ಮಗ. ಭ್ರಷ್ಟಾಚಾರ ಮಿತಿಮೀರಿ ಅಧಿಕಾರ ಕಳೆದುಕೊಳ್ಳುವಂತೆ ಆಯ್ತು. ಈಗ ಬಸವರಾಜ ಬೊಮ್ಮಾಯಿ ಏನು ಮಾಡ್ತಾರೋ ನೋಡಬೇಕಾಗಿದೆ. ಅದೇ ರೀತಿ ಬಾಂಬೆ ಸೇರಿಕೊಂಡು ಮಂತ್ರಿಗಾಗಿ ಸ್ಥಾನಕ್ಕಾಗಿ ಹೋಗಿದ್ದವರು ಈಗ ಏನು ಸಾಧನೆ ಮಾಡಿದ್ರು ಎಂದು ಶಿವಶಂಕರ್​ ರೆಡ್ಡಿ ಪ್ರಶ್ನಿಸಿದರು.

Last Updated : Aug 2, 2021, 9:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.