ಚಿಕ್ಕಬಳ್ಳಾಪುರ: ಎರಡನೇ ಹಂತದ ಗ್ರಾಮಪಂಚಾಯತಿ ಚುನಾವಣೆ ಹಿನ್ನೆಲೆ ಜಿಲ್ಲೆಯ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ರೋಷನ್ ಅಬ್ಬಾಸ್ ಸ್ವಕ್ಷೇತ್ರ ಅಲಿಪುರದಲ್ಲಿ ಮತದಾನ ಮಾಡಿದ್ದಾರೆ.
ನಂತರ ಮಾತನಾಡಿದ ಅವರು ತಾಲೂಕು ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷದಿಂದ 14 ಸ್ಥಾನಗಳಿಗೆ ಸ್ಪರ್ಧಿಸಲಾಗಿದೆ. ಎಲ್ಲ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಪಕ್ಷದ ಬೆಂಬಲಿಗರು ಗೆಲ್ಲಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಹಾಗೂ ದೇವೇಗೌಡರು ತಾಲೂಕಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಗೌರಿಬಿದನೂರು ಶಾಸಕ ಎನ್ಎಚ್ ಶಿವಶಂಕರ್ ರೆಡ್ಡಿ ಕ್ಷೇತ್ರದ ಸ್ವಗ್ರಾಮದಲ್ಲಿ ಮತವನ್ನು ಚಲಾಯಿಸುವುದರ ಮೂಲಕ ಮತದಾನ ಮಾಡುವಂತೆ ಪ್ರೋತ್ಸಾಹ ನೀಡಿದರು. ತಾಲೂಕಿನ ನಾಗಸಂದ್ರದಲ್ಲಿ ಮತದಾನ ಮಾಡಿ ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು.