ETV Bharat / state

ವೇತನ ಕೇಳಿದ್ದಕ್ಕೆ ಅಧಿಕಾರಿಯಿಂದ ಹಲ್ಲೆ ಆರೋಪ... ಆತ್ಮಹತ್ಯೆಗೆ ಯತ್ನಿಸಿದ ಪೌರ ಕಾರ್ಮಿಕ - ಚಿಕ್ಕಬಳ್ಳಾಪುರ

ಕಳೆದ 13 ತಿಂಗಳಿಂದ ವೇತನ ಪಾವತಿಸಿಲ್ಲ. ಈ ಬಗ್ಗೆ ವಿಚಾರಿಸಲು ಹೋದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರ ಮನನೊಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಸಂದೀಪ್ ಹೇಳಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ
author img

By

Published : Jun 20, 2019, 1:48 AM IST

Updated : Jun 20, 2019, 6:52 AM IST

ಚಿಕ್ಕಬಳ್ಳಾಪುರ: ಬಾಕಿ ಉಳಿಸಿಕೊಂಡ ವೇತನ ನೀಡುವಂತೆ ಕೋರಿದಾಗ ಆರೋಗ್ಯ ಅಧಿಕಾರಿ ಹಲ್ಲೆ ನಡೆಸಿದ್ದಾರೆ ಎಂದು ಶಿಡ್ಲಘಟ್ಟ ನಗರಸಭೆಯ ಪೌರ ಕಾರ್ಮಿಕರೊಬ್ಬರು ಆರೋಪಿಸಿದ್ದಾರೆ.

ಕಳೆದ 13 ತಿಂಗಳಿಂದ ವೇತನ ಪಾವತಿಸಿಲ್ಲ. ಈ ಬಗ್ಗೆ ವಿಚಾರಿಸಲು ಹೋದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರ ಮನನೊಂದು ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಸಂದೀಪ್ ಹೇಳಿದ್ದಾರೆ.

ನಗರಸಭೆಯಲ್ಲಿ ಹೊರಗುತ್ತಿಗೆ ಒಪ್ಪಂದದ ಮೇಲೆ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ದೊಗರನಾಯಕನಹಳ್ಳಿ ನಿವಾಸಿ ಸಂದೀಪ್ (28) ಅವರು ಜಿರಳೆ ನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಬಳಿಕ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ

ಆರು ವರ್ಷಗಳ ಹಿಂದೆ ಪೌರ ಕಾರ್ಮಿಕನಾಗಿ ನಗರ ಸಭೆಗೆ ಸೇರಿದ್ದ ಸಂದೀಪ್​ ಅವರಿಗೆ ಕಳೆದ 13 ತಿಂಗಳಿಂದ ಸರಿಯಾಗಿ ವೇತನ ಪಾವತಿ ಆಗುತ್ತಿರಲಿಲ್ಲ. ಸಾಕಷ್ಟು ಸಾಲ ಮಾಡಿದ್ದು ಸಂಬಳ ಬಾರದೇ ಸಾಲದ ಹಣ ತೀರಿಸಲು ಆಗುತ್ತಿರಲಿಲ್ಲ. ಸಾಲ ನೀಡಿದವರು ನಿತ್ಯ ಮನೆಗೆ ಬಂದು ಹಣ ಮರಳಿಸುವಂತೆ ಒತ್ತಾಯಿಸುತ್ತಿದ್ದರು. ನಗರಸಭೆಯ ಪೌರಾಯುಕ್ತರಿಗೆ ವೇತನ ನೀಡುವಂತೆ ಕೋರಿದಾಗ, 'ನಿಮಗೆ ಸಾಲ ನೀಡುವವರು ಗುತ್ತಿಗೆದಾರರು. ಅವರ ಬಳಿ ಹಣ ಕೇಳಿ' ಎಂದು ಕಳುಹಿಸಿದ್ದಾರೆ.

ಈ ಬಗ್ಗೆ ಗುತ್ತಿಗೆದಾರರ ಬಳಿ ಪ್ರಸ್ತಾಪಿಸಿದಾಗ, 'ನಗರಸಭೆಯಿಂದ ಇನ್ನೂ ನನಗೆ ಚೆಕ್ ಕೊಟ್ಟಿಲ್ಲ. ನಾನು ಎಲ್ಲಿಂದ ವೇತನ ನೀಡಲಿ' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಪಾವತಿಯಾಗದ ವೇತನ, ಸಾಲಗಾರರ ಒತ್ತಡ ಹಾಗೂ ಅಧಿಕಾರಿಗಳ ಹಲ್ಲೆಯಿಂದ ತೀವ್ರ ಮನನೊಂದು ಸಂದೀಪ್​ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Intro:ಕಳೆದ 13 ತಿಂಗಳಿಂದಲೂ ವೇತನವಿಲ್ಲದ ಪೌರ ಕಾರ್ಮಿಕನೊಬ್ಬ ನಗರಸಭೆ ಕಚೇರಿಯಲ್ಲೆ ಜಿರಳೆ ನಾಶಕ ಔಷಧಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.
Body:ಶಿಡ್ಲಘಟ್ಟ ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿರುವ ದೊಗರನಾಯಕನಹಳ್ಳಿಯ ವಾಸಿ 28 ವರ್ಷದ ಸಂದೀಪ್ ಜಿರಳೆನಾಶಕ ಚಾಕ್‍ಫೀಸ್ ತಿಂದು ಅಸ್ವಸ್ಥಗೊಂಡ ವ್ಯಕ್ತಿಯಾಗಿದ್ದಾನೆ.

ಕಳೆದ 8 ವರ್ಷಗಳ ಹಿಂದೆ ಪೌರಕಾರ್ಮಿಕನಾಗಿ ಕೆಲಸಕ್ಕೆ ಸೇರಿದ ಸಂದೀಪ್‍ಗೆ ಕಳೆದ 13 ತಿಂಗಳಿಂದಲೂ ಸಂಬಳವಿಲ್ಲದ ಕಾರಣ ಬದುಕು ನಡೆಸಲು ಸಾಲ ಮಾಡಿದ್ದು ಸಾಲಗಾರರು ದಿನಾಲೂ ಹಣ ವಾಪಸ್ ಮಾಡುವಂತೆ ಕಾಟ ಕೊಟ್ಟಿದ್ದಾರೆ. ಇತ್ತ ನಗರಸಭೆಯಲ್ಲಿ ಪೌರಾಯುಕ್ತರನ್ನು ಹಾಗೂ ಆರೋಗ್ಯ ನಿರೀಕ್ಷಕರನ್ನು ಕೇಳಿದರೆ ನಿಮಗೆ ಸಂಬಳ ಕೊಡೋದು ಗುತ್ತಿಗೆದಾರರು ಅವರನ್ನು ಕೇಳಿ ಎಂದು ಹೇಳಿ ಕಳುಹಿಸಿದ್ದಾರೆ. ಇದೇ ವಿಷಯವನ್ನು ಗುತ್ತಿಗೆದಾರರ ಬಳಿ ಕೇಳಿದರೆ ನಗರಸಭೆಯಿಂದ ನನಗೆ ಚೆಕ್ ಕೊಟ್ಟಿಲ್ಲ. ನಾನೇನು ಮಾಡಲಿ. ನಗರಸಭೆಯವರು ಕೊಟ್ಟರೆ ನಾನೂ ನಿಮಗೆ ಕೊಡ್ತೇನೆ ಎಂದು ನಮಗೆ ಸಂಬಳ ಕೊಡದೆ ಅಲೆದಾಡಿಸುತ್ತಿದ್ದರು ಎಂದು ಸಂದೀಪ ಅವಲತ್ತುಕೊಳ್ಳುತ್ತಾನೆ.

ಒಟ್ಟಾರೆ ಹಗಲು ರಾತ್ರಿ ಎನ್ನದೆ ದುಡಿಸಿಕೊಂಡು ಪೌರಕಾರ್ಮಿಕರಿಗೆ ಸಂಬಳ ನೀಡದ ನಗರಾಡಳಿತ ನಗರವನ್ನು ಯಾವ ರೀತಿ ನೋಡಿಕೊಳ್ಳುತ್ತೆ ಎಂಬ ಚರ್ಚೆ ಸಾರ್ವಜನಿಕರಲ್ಲಿ ಶುರುವಾಗಿದೆ.Conclusion:
Last Updated : Jun 20, 2019, 6:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.