ETV Bharat / state

ಬೈಕ್​ನ ನಂಬರ್ ಪ್ಲೇಟ್ ಮೇಲೆ ಚಿಹ್ನೆ, ಹೆಸರುಗಳಿದ್ರೆ ಈಗ್ಲೇ ತೆಗೆದುಬಿಡಿ.. - Bike Name Plate Remove

ಚಿಕ್ಕಬಳ್ಳಾಪುರ ನಗರದಲ್ಲಿಂದು ಬೈಕ್​ಗಳ ತಪಾಸಣೆ ನಡೆಸಿ, ನಂಬರ್ ಪ್ಲೇಟ್​ ಮೇಲಿನ ಚಿಹ್ನೆ, ಇತರೆ ಹೆಸರುಗಳನ್ನು ತೆರವುಗೊಳಿಸಲಾಯಿತು.

Bike Name Plate Remove
ಬೈಕ್​ ನೇಮ್​ ಪ್ಲೇಟ್​
author img

By

Published : Mar 20, 2021, 1:47 PM IST

ಚಿಕ್ಕಬಳ್ಳಾಪುರ: ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹೆಚ್​.ಡಿ. ಮಂಜುನಾಥ್ ನೇತೃತ್ವದಲ್ಲಿ ನಗರದಲ್ಲಿ ಬೈಕ್ ವೀಕ್ಷಣೆ ಮತ್ತು ಬೈಕ್​ಗಳ ನಂಬರ್ ಪ್ಲೇಟ್ ಮೇಲೆ ಇರುವ ಸಂಘ ಸಂಸ್ಥೆಗಳ ನೇಮ್ ಪ್ಲೇಟ್​ಗಳು, ಚಿಹ್ನೆಗಳು, ಇತರೆ ಬೋರ್ಡ್​ಗಳನ್ನು ತೆರವುಗೊಳಿಸಲಾಯಿತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಹೆಚ್​.ಡಿ. ಮಂಜುನಾಥ್

ಇದೇ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೆಚ್​.ಡಿ. ಮಂಜುನಾಥ್ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ನಾವು ಮತ್ತು ನಮ್ಮ ತಂಡ ಕಾರ್ಯನಿರ್ವಹಿಸುತ್ತಿದ್ದೇವೆ. ಚಿಕ್ಕಬಳ್ಳಾಪುರದ ಜನತೆ ಈ ವಿಚಾರ ಗಮನದಲ್ಲಿಟ್ಟುಕೊಂಡು, ಮೋಟಾರು ವಾಹನಗಳ ಮೇಲೆ ಚಿಹ್ನೆಗಳು ಮತ್ತು ಹೆಸರುಗಳು ಇದ್ದರೆ ತಕ್ಷಣ ತೆಗೆಯಬೇಕು, ಇಲ್ಲದಿದ್ರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ವಾಹನ ನಿರೀಕ್ಷಕರಾದ ಗೋಪಿಕೃಷ್ಣ ಹಾಗೂ ನಾಗರಾಜ್ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.