ETV Bharat / state

ಗಂಡನಿಗೆ ಡೈವೋರ್ಸ್‌ ಕೊಡಿಸಿ ನಂಬಿಸಿ ಮೋಸ.. ಆದರೆ, ನಾನನವನಲ್ಲ ಅಂತಾವ್ನೇ ಅವನು..

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ತುಳುವನೂರು ಗ್ರಾಮದ ಡಿಎಸ್​ಎಸ್​ ಮುಖಂಡನ ಮಗ ನರೇಂದ್ರನ ಮೇಲೆ ಮಹಿಳೆ ಮಾಡಿದ ಆರೋಪಗಳು ಸುಳ್ಳು ಎಂದು ಆರೋಪಿತ ವ್ತಕ್ತಿ ನರೇಂದ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಆರೋಪಕ್ಕೊಳಗಾದ ವ್ಯಕ್ತಿ ನರೇಂದ್ರ
author img

By

Published : Sep 27, 2019, 9:33 PM IST

ಚಿಕ್ಕಬಳ್ಳಾಪುರ: ವಿಶೇಷ ಚೇತನ ಮಹಿಳೆಗೆ ನಾನು ಯಾವುದೇ ಮಾತು ಕೊಟ್ಟಿಲ್ಲ ಹಾಗೂ ಮೋಸವನ್ನೂ ಮಾಡಿಲ್ಲ ಎಂದು ನರೇಂದ್ರ ಎಂಬಾತ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

ಆರೋಪಕ್ಕೊಳಗಾದ ವ್ಯಕ್ತಿ ನರೇಂದ್ರ..

ಚಿಕ್ಕಬಳ್ಳಾಪುರ ನಗರದ ವೆಂಕಟಗಿರಿಕೋಟೆ ನಿವಾಸಿ ವಿಶೇಷ ಚೇತನ ಮಹಿಳೆಯೊಬ್ಬರು, ಚಿಂತಾಮಣಿ ತಾಲೂಕಿನ ತುಳವನೂರು ಗ್ರಾಮದ ಡಿಎಸ್​ಎಸ್​ ಮುಖಂಡರ ಮಗ ನರೇಂದ್ರ ಎಂಬ ವ್ಯಕ್ತಿ ಮೋಸ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ಇರುವ ಫೋಟೋಗಳನ್ನು ಹರಿಬಿಟ್ಟಿದ್ದರು. ನನ್ನ ಜೊತೆ ನರೇಂದ್ರ ಸ್ನೇಹವನ್ನು ಬೆಳೆಸಿಕೊಂಡರು. ನನ್ನ ಪತಿಯಿಂದ ವಿಚ್ಛೇದನಕೊಡಿಸಿ, ಮದುವೆಯಾಗುವುದಾಗಿ ಹೇಳಿದ್ದರು. ನನ್ನ ಮಗನ ಮುಂದೆಯೇ ತಾಳಿ ಕಟ್ಟಿ ಕೆಲಕಾಲ ದೇವಾಲಯ, ಪಾರ್ಕ್​ಗಳನ್ನೂ ಸುತ್ತಾಡಿಸಿದ್ದರು. ಈಗ ಮೋಸ ಮಾಡಿ ಹಣ, ಒಡವೆಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ನೊಂದ ಮಹಿಳೆಯೊಬ್ಬರು ಆರೋಪಿಸಿದ್ದರು.

ಆದರೆ, ನರೇಂದ್ರ ಮಾತ್ರ ಬೇರೆಯದ್ದೇ ರೀತಿ ಹೇಳುತ್ತಿದ್ದಾರೆ. ಮನೆಯ ಪಕ್ಕದಲ್ಲೇ ಇದ್ದ ಕಾರಣ ಅವರ ಮಗುವಿಗೆ ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಿಸಿ, ಸಹಾಯ ಮಾಡಿದ್ದೇನೆ ಅಷ್ಟೇ.. ಫೋಟೋಗಳನ್ನು ಎಡಿಟ್ ಮಾಡಿಸಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆಂದು ನರೇಂದ್ರ ಪ್ರತ್ಯಾರೋಪ ಮಾಡ್ತಿದ್ದಾರೆ. ಒಂದು ಕಡೆ ಮಹಿಳೆ ನನಗೆ ಅನ್ಯಾಯವಾಗಿದೆ ಎಂದು ಗೋಗರಿಯುತ್ತಿದ್ದಾರೆ. ಮತ್ತೊಂದು ಕಡೆ ಸುಳ್ಳು ಆರೋಪಗಳನ್ನು ನನ್ನ ಮೇಲೆ ಹೇಳುತ್ತಿದ್ದಾರೆಂದು ನರೇಂದ್ರ ಪ್ರತ್ಯಾರೋಪ ಮಾಡುತ್ತಿದ್ದಾರೆ. ನಿಜಾಂಶಗಳೇನು ಎಂಬುದನ್ನು ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ.

Intro:Body:ಮಧುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಿಕಲಚೇತನ ಮಹಿಳೆಗೆ ಮೋಸ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದ ಘಟನೆ ಜಿಲ್ಲೆಯ ಚಿಂತಾಮಣಿ ವ್ಯಾಪ್ತಿಯಲ್ಲಿ ನಡೆದಿದ್ದು ಈಗ ಆ ಸ್ಟೋರಿಗೆ ಹೊಂಸದೊಂದು ಟ್ವಿಸ್ಟ್ ದೊರಕಿದೆ.

ನಗರದ ವೆಂಕಟಗಿರಿಕೋಟೆ ನಿವಾಸಿ ಮಹೇಶ್ವರಿ ಮೋಸ ಹೋದ ಅಂಗವಿಕಲ ಮಹಿಳೆಯಾಗಿದ್ದು, ಚಿಂತಾಮಣಿ ತಾಲ್ಲೂಕಿನ ತುಳವನೂರು ಗ್ರಾಮದ ಡಿಎಸ್ ಎಸ್ ಮುಖಂಡನ ಮಗ ನರೇಂದ್ರ ಮೋಸ ಮಾಡಿರುವುದಾಗಿ ಹೇಳಿಕೆ ನೀಡಿದರು.ಆದರೆ ಈಗ ನರೇಂದ್ರ ನನಗೂ ಆ ಮಹಿಳೆಗೂ ಯಾವುದೇ ಸಂಭಂದವಿಲ್ಲವೆಂದು ಹೇಳಿಕೆ ನೀಡಿದ್ದಾರೆ.

ಈಗಾಗಲೇ ಮತ್ತೋರ್ವ ವ್ಯಕ್ತಿಯ ಜೊತೆ ಮೊದುವೆಯಾದ ಮಹೇಶ್ವರಿ ಜೊತೆ ಸ್ನೇಹವನ್ನು ಬೆಳಸಿಕೊಂಡ ನರೇಂದ್ರ ವಿಚ್ಚೇದನಕೊಡಿಸಿ ಮದುವೆಯಾಗುವುದಾಗಿ ಹೇಳಿ ಮಹೇಶ್ವರಿ ಮಗನ ಮುಂದೆಯೇ ತಾಳಿ ಕಟ್ಟಿ ಕೆಲಕಾಲ ದೇವಲಯ, ಪಾರ್ಕ್ ಗಳ ಸುತ್ತಾಟ ನಡೆಸಿ ಕೊನೆಗೆ ಮೋಸ ಮಾಡಿ ಹಣ,ಒಡವೆಯನ್ನು ಲಪಟಾಯಿಸಿ ಎಸ್ಕೇಪ್ ಆಗಿರುವುದಾಗಿ ಹೇಳಿಕೆ ನೀಡಿದರು.

ಆದರೆ ಇಂದು ಡಿಎಸ್ಎಸ್ ಮುಖಂಡನ‌ ಮಗ ಚಿಂತಾಮಣಿ ನಗರದಲ್ಲಿ ಸುದ್ದಿ ಗೋಷ್ಟಿಯನ್ನು ಏರ್ಪಡಿಸಿ ನನಗೂ ಆ ಮಹಿಳೆಗೂ ಯಾವುದೇ ಸಂಭಂದವಿಲ್ಲವೆಂದು ಮಾಹಿತಿ ನೀಡಿದ್ದಾರೆ.

ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗುವುದಾಗಿ ನಂಬಿಸಿ ಹಣ,ಒಡವೆಗಳನ್ನು ಲಪಾಟಾಯಿಸಿರುವುದಾಗಿ ಪೊಲೀಸರ ಮೊರೆಹೋಗಿದ್ದ ಮಹೇಶ್ವರಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು ನನಗೂ ಮಹೇಶ್ವರಿಗೂ ಯಾವುದೇ ಮದುವೆ ನಡೆದಿಲ್ಲಾ ಎಂದು ನರೇಂದ್ರ ಸ್ಪಷ್ಟಪಡಿಸಿದ್ದಾರೆ.ಮನೆಯ ಪಕ್ಕದಲ್ಲೇ ಇದ್ದ ಕಾರಣ ಅವರ ಮಗುವಿಗೆ ಹುಷಾರಿಲ್ಲದೇ ಇದರಿಂದ ಆಸ್ಪತ್ರೆಗೆ ದಾಖಲಿಸಿ ಸಹಾಯ ಮಾಡಿದ್ದೇನೆಷ್ಟೇ ,ಇನ್ನೂ ಪೋಟೋ ಗಳನ್ನು ಎಡಿಟ್ ಮಾಡಿಸಿದ್ದು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾರೆಂದು ತಿಳಿಸಿದ್ದಾರೆ.

ಒಂದು ಕಡೆ ಮಹೇಶ್ವರಿ ನನಗೆ ಅನ್ಯಾಯವಾಗಿದೆ ಎಂದು ಗೋಗರಿಯುತ್ತಿದ್ದರೆ.ಮತ್ತೊಂದು ಕಡೆ ಸುಳ್ಳು ಆರೋಪಗಳನ್ನು ನನ್ನ ಮೇಲೆ ತಳ್ಳುತ್ತಿದ್ದಾರೆಂದು ನರೇಂದ್ರ ಆರೋಪಿಸುತ್ತಿದ್ದಾರೆ. ಒಟ್ಟಾರೆ ನಿಜಾಂಶಗಳೇನು ಎಂಬುವುದನ್ನು ಪೊಲೀಸರು ತಿಳಿಸಬೇಕಾಗಿದ್ದು ನಂತರವಷ್ಟೇ ಸತ್ಯಂಶಗಳನ್ನು ಹೊರಬಿಳಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.