ETV Bharat / state

ಚಿಕ್ಕಬಳ್ಳಾಪುರ: ನಿವೃತ್ತ ಐಎಎಸ್ ಅಧಿಕಾರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಚಿಕ್ಕಬಳ್ಳಾಪುರ ಜಿಲ್ಲೆಯ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

rajotsava-award-for-retired-ias-officer-k-amarnarayana
ಚಿಕ್ಕಬಳ್ಳಾಪುರ: ನಿವೃತ್ತ ಐಎಎಸ್ ಅಧಿಕಾರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
author img

By

Published : Oct 31, 2020, 7:04 PM IST

ಚಿಕ್ಕಬಳ್ಳಾಪುರ: ನಿವೃತ್ತಿ ನಂತರವೂ ಪರಿಸರ ಪೂರಕ ಕಾರ್ಯಕ್ರಮಗಳ ರೂಪಿಸಿ ಪರಿಸರದ ಅಭಿವೃದ್ದಿಗೆ ಶ್ರಮಿಸುತ್ತಿರುವ ಜಿಲ್ಲೆಯ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

rajotsava-award-for-retired-ias-officer-k-amarnarayana
ಚಿಕ್ಕಬಳ್ಳಾಪುರ: ನಿವೃತ್ತ ಐಎಎಸ್ ಅಧಿಕಾರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
ಕೆ.ಅಮರನಾರಾಯಣ ಅವರು ಮೂಲತಃ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ ಸುಗಟೂರು ಗ್ರಾಮದವರಾಗಿದ್ದಾರೆ. 1954ರ ಜುಲೈ 15ರಂದು ಜನಿಸಿದ ಅವರು, ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಎಂ.ಎ ಎಲ್ಎಲ್‌ಬಿ ಪದವಿ ಪಡೆದು ಇಂಗ್ಲೆಂಡ್​ನ ಲೇಸ್ಟರ್ ವಿಶ್ವವಿದ್ಯಾಲಯದಲ್ಲಿ ಟಿಸಿಟಿ ಫೆಲೋಶಿಪ್ ಪಡೆದುಕೊಂಡರು.

ಕೆ.ಅಮರನಾರಾಯಣ ಅವರು, ರಾಜ್ಯದ ವಿವಿಧ ಇಲಾಖೆ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಮೈಸೂರು ವಿಶ್ವವಿದ್ಯಾಲಯ, ಸಿಸಿ ಸ್ಕೌಟ್ಸ್ ಮತ್ತು ಗೈಡ್ಸ್, ರಾಷ್ಟ್ರೀಯ ಸೇವಾ ಯೋಜನೆ, ಶ್ರಮದಾನ, ಸ್ವಚ್ಚತಾ ಕಾರ್ಯಕ್ರಮಗಳು, ಪರಿಸರ ಕಾಳಜಿ, ತ್ಯಾಜ್ಯನಿರ್ವಹಣೆ ಬಗ್ಗೆ ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ.

ಅವರು ಬಯಲುಸೀಮೆ ಪ್ರದೇಶದ ಬಗ್ಗೆ ಹೆಚ್ಚಿನ‌ ಕಾಳಜಿವಹಿಸಿದ್ದು, ತಮ್ಮ ಸೇವಾ ಅವಧಿ‌ ಸೇರಿದಂತೆ ನಿವೃತ್ತರಾದ ನಂತರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ. ಹೊಂಗೆ ಬೆಳೆದರೆ ಹೆಂಗೆ, ರೈತ ಮಿತ್ರ ಹಸಿರು ಹೊನ್ನು, ಕೋಟಿ ನಾಟಿ, ಕಲ್ಲರಳಿ ಹೂವಾಗಿ, ಕೃಷಿ ಅರಣ್ಯ, ಜೀವವೈ ವಿದ್ಯಾವನ, ಕೃತಿಯೊಡನೆ ಸಂಭ್ರಮಿಸು, ದುರ್ಗದ ಮೊರೆ ಹಸಿರಿಗೆ ಕರೆ, ಜಲಕ್ಷಾಮ ನಿಗ್ರಹ, ಬಾಟಲಿ ನೀರು ಏಕೆ ಮಳೆ ನೀರು ಓಕೆ, ಬರುವಾಗ ಭಕ್ತ ಹೋಗುವಾಗ ರೋಗಿ, ಅನುಧಾನ ಯಾಕೆ ಶ್ರಮದಾನ‌ ಓಕೆ ಹೀಗೆ ಪರಿಸರ ರಕ್ಷಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ.

ಕೆ.ಅಮರನಾರಾಯಣ ಅವರು 2005ರ ನಂತರ ಪರಿಸರಕ್ಕಾಗಿ ತಮ್ಮನ್ನು ಮುಡುಪಾಗಿಟ್ಟು ನಿವೃತ್ತಿಯ ನಂತರವು ಹಗಲಿರುಳು ದುಡಿದು ಶ್ರಮಿಸಿದ್ದಾರೆ. ಇಂದಿಗೂ ಪ್ರತಿವರ್ಷ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.