ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಉತ್ತಮ ಮಳೆ ಆದರೂ ಈ ಜಿಲ್ಲೆಗೆ ಹೇಳುವಂತಹ ಮಳೆ ಆಗಿಲ್ಲ. ಬರೇ ಮೋಡ ಮುಸುಕಿದ ವಾತಾವರಣ ತುಂತುರು ಮಳೆ, ಆಗಾಗ ಬಿಸಿಲು. ಈ ವಾತಾವರಣ ಕೃಷಿಯ ಮೇಲೆ ಅಡ್ಡ ಪರಿಣಾಮ ಬೀರಿದೆ. ರೈತರಿಗೆ ಕೀಟ ನಾಶಕಗಳನ್ನು ಸಿಂಪಡಿಸಿದಷ್ಟೂ ಸಾಕಾಗದ ಪರಿಸ್ಥಿತಿ ಈ ಹವಾಮಾನದಿಂದ ನಿರ್ಮಾಣವಾಗಿದೆ.
ಬೆಳೆದ ಬೆಳೆಗಳಿಗೆ ಎಲ್ಲಿಲ್ಲದ ರೋಗಬಾಧೆ, ಕೀಟ ಬಾಧೆ ಕಾಡುತ್ತಿದೆ. ಇದರಿಂದ ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳೋಕೆ ಕ್ರಿಮಿನಾಶಕಗಳ ಮೊರೆ ಹೋಗುವಂತಾಗಿದೆ. ವಾರಕ್ಕೊಮ್ಮೆ ಕ್ರಿಮಿನಾಶಕ ಸಿಂಪಡಣೆ ಮಾಡ್ತಿದ್ದವರು ಈಗ ಮೂರ್ನಾಲ್ಕು ಬಾರಿ ಮಾಡುವಂತಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಬೆಂಗಳೂರು ಮಹಾನಗರದ ಜನತೆಯ ಪಾಲಿಗೆ ವೆಜಿಟಿನಲ್ ಬ್ಯಾಸ್ಕೆಟ್, ಪ್ರೂಟ್ ಬೌಲ್. ಹೂ, ಹಣ್ಣು, ತರಕಾರಿಗಳನ್ನು ಬೆಳೆಯುವುದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಫೇಮಸ್. ಕೇವಲ ಬೆಂಗಳೂರು ಅಷ್ಟೇ ಅಲ್ಲದೆ ಅಂತಾರಾಜ್ಯ ದೇಶ ವಿದೇಶಿಗಳಿಗೂ ಇಲ್ಲಿಂದ ರಫ್ತು ಮಾಡುತ್ತಾರೆ.
ಅದರಲ್ಲೂ ಯಥೇಚ್ಛವಾಗಿ ಬೆಳೆಯೋ ಗುಲಾಬಿ, ಚೆಂಡು, ಸೇವಂತಿಗೆ ಹೂವಿಗೆ ಈಗ ಮಳೆ ಕಾಟ. ಮಳೆಯಿಂದ ಹೂಗಳು ನೆಂದು ನೆಂದು ಕೊಳೆತು ಹೋಗಿ ಬೆಲೆ ಕಡಿಮೆ ಆಗುತ್ತಿದೆ. ಇನ್ನು ಟೊಮೇಟೊ, ಬೀನ್ಸ್, ಸೌತೆಕಾಯಿ, ಮೆಕ್ಕೆಜೋಳ ಸೇರಿದಂತೆ ದ್ರಾಕ್ಷಿ, ದಾಳಿಂಬೆ ಎಲ್ಲ ಬೆಳೆಗಳಿಗೂ ಈಗ ಕ್ರೀಮಿಗಳ ಕಾಟ, ರೋಗ ಬಾಧೆ ಕಾಡುತ್ತಿದ್ದು ರೈತರು ಕ್ರೀಮಿನಾಶಕಗಳ ಸಿಂಪಡಣೆ ಮಾಡುತ್ತಿದ್ದಾರೆ.
ಇತ್ತ ಕ್ರಿಮಿನಾಶಕ ಸಿಂಪಡಣೆ ಮಾಡಿದರೂ ಆಗಾಗ್ಗೆ ಬರುವ ಮಳೆ ಸಿಂಪಡಣೆ ಮಾಡಿದ ಕ್ರೀಮಿನಾಶಕವನ್ನು ತೊಳೆದು ಹಾಕುತ್ತದೆ. ಇದರಿಂದ ಮತ್ತೆ ಮತ್ತೆ ಕ್ರಿಮಿನಾಶಕ ಸಿಂಪಡಣೆ ಮಾಡಿ ಮಾಡಿ ರೈತರು ಸುಸ್ತಾಗುವಂತಾಗಿದೆ. ಅಲ್ಲದೇ ಇದರಿಂದ ಕ್ರಿಮಿನಾಶಕಗಳ ಅಂಗಡಿ ಮಾಲೀಕರನ್ನು ಶ್ರೀಮಂತರನ್ನಾಗಿ ಮಾಡುವಂತಾಗಿದೆ ವಿನಃ ಯಾವುದೇ ಪರಿಹಾರ ಆಗುತ್ತಿಲ್ಲ ಎಂಬುದು ರೈತರ ಅಳಲು.
ಇದನ್ನೂ ಓದಿ : ಬಾಳೆ ಬೆಳೆ ಹಾನಿ.. ಹೆಕ್ಟೇರ್ಗೆ ಸರ್ಕಾರದಿಂದ ನಿಗದಿಯಾದ ಪರಿಹಾರ ಧನ ಎಷ್ಟು ಗೊತ್ತಾ?