ಚಿಕ್ಕಬಳ್ಳಾಪುರ: ಸ್ಥಳೀಯ ಶಾಸಕರು ಶಾಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಅನೇಕ ವರ್ಷಗಳಿಂದಲೂ ಮೂಲೆಗುಂಪಾಗಿದ್ದ ಶಾಲೆಯನ್ನು ಪಂಚಾಯತ್ ಅಧಿಕಾರಿಗಳು ಸ್ವಚ್ಛಗೊಳಿಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಘಟನೆ ಚೇಳೂರಿನಲ್ಲಿ ನಡೆದಿದೆ.
ಚೇಳೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಾಳೆ ಕೆಡಿಪಿ ಸಭೆ ಸೇರಿದಂತೆ ಜನತಾ ದರ್ಶನವನ್ನು ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದು, ಜಿಲ್ಲೆಯ ಅಧಿಕಾರಿಗಳು ಸೇರಿ ಶಾಸಕರಾದ ಸುಬ್ಬಾರೆಡ್ಡಿ ಭಾಗಿಯಾಗಲಿದ್ದಾರೆ. ಇದರ ಸಲುವಾಗಿಯೇ ಶಾಲಾ-ಕಾಲೇಜಿನ ಆವರಣದಲ್ಲಿ ಪಂಚಾಯತ್ ಅಧಿಕಾರಿಗಳು ಸ್ವಚ್ಛತೆಗೆ ಕೈಹಾಕಿದಾಗ ಇಷ್ಟು ದಿನ ಇಲ್ಲದ್ದು ಶಾಸಕರಿಗಾಗಿ ಸ್ವಚ್ಛತೆ ಕಾರ್ಯ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷಗಳಿಂದಲೂ ಶಾಲೆ ಹಾಗೂ ಕಾಲೇಜಿನ ಮುಂಭಾಗವೇ ಸ್ವಚ್ಛತೆ ಇಲ್ಲದಂತಾಗಿತ್ತು. ಇದೀಗ ಶಾಸಕರ ಬರುವಿಕೆಗೆ ಪಂಚಾಯತ್ ಅಧಿಕಾರಿಗಳು ಶಾಲೆಯ ಸ್ವಚ್ಛತೆಗೆ ಕೈ ಹಾಕಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.