ETV Bharat / state

ಸಂಸದರ ಆಗಮನಕ್ಕೂ ಮೊದಲೇ ಬೆಸ್ಕಾ ಉದ್ಘಾಟಿಸಿದ ಶಾಸಕ: ಕೃಷ್ಣಾರೆಡ್ಡಿ ವಿರುದ್ಧ 'ಮುನಿ'ದ ಸ್ವಾಮಿ - Chikkaballapura latest news

ಸಂಸದರು ಬರುವುದಕ್ಕೂ ಮೊದಲೇ ಶಾಸಕ ಎಂ. ಕೃಷ್ಣಾರೆಡ್ಡಿ ಬೆಸ್ಕಾಂ ಕಚೇರಿ ಉದ್ಘಾಟನೆ ಮಾಡಿದ್ದು, ಇದರಿಂದ ಕೋಪಗೊಂಡ ಸಂಸದ ಎಸ್.ಮುನಿಸ್ವಾಮಿ, ತುಘಲಕ್ ದರ್ಬಾರ್ ಮಾಡುವುದನ್ನು ನಿಲ್ಲಿಸಬೇಕು ಎಂದು ಕಿಡಿ ಕಾರಿದ್ದಾರೆ.

mp-muniswamy
ಕೃಷ್ಣಾರೆಡ್ಡಿ ವಿರುದ್ಧ 'ಮುನಿ'ಸ್ವಾಮಿ
author img

By

Published : Jan 29, 2021, 10:58 AM IST

Updated : Jan 29, 2021, 7:04 PM IST

ಚಿಕ್ಕಬಳ್ಳಾಪುರ: ಸಂಸದರು ಬರುವುದಕ್ಕೂ ಮೊದಲೇ ಬೆಸ್ಕಾಂ ಕಚೇರಿ ಉದ್ಘಾಟನೆ ಮಾಡಿದ ಶಾಸಕ ಎಂ. ಕೃಷ್ಣಾರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಸದ ಎಸ್.ಮುನಿಸ್ವಾಮಿ, ತುಘಲಕ್ ದರ್ಬಾರ್ ಮಾಡುವುದನ್ನು ನಿಲ್ಲಿಸಬೇಕು ಎಂದು ಟಾಂಗ್​ ನೀಡಿದ್ದಾರೆ.

ಲೋಕಸಭೆ ಹಾಗೂ ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಬೆಸ್ಕಾಂ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುವುದಿಲ್ಲ. ಕಾರ್ಯಕ್ರಮವನ್ನು ಮುಂದೂಡಿ ಎಂದು ತಿಳಿಸಿದ್ದರೂ ಸಹ ಶಿಷ್ಟಾಚಾರವನ್ನು ಉಲ್ಲಂಘಿಸಿ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಸಂಸದ ಎಸ್. ಮುನಿಸ್ವಾಮಿ ಒತ್ತಾಯಿಸಿದ್ದು, ಇದೇ ವೇಳೆ ಸ್ಥಳೀಯ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.

ಸಂಸದ ಎಸ್.ಮುನಿಸ್ವಾಮಿ

ಉಸ್ತುವಾರಿ ಸಚಿವರು ಮತ್ತು ಸಂಸದರನ್ನು ಕಡೆಗಣಿಸಿ ಉದ್ಘಾಟನೆ ಮಾಡಿರುವ ಕ್ರಮ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನಕ್ಕೆ ಎಸಗಿದ ಅಪಚಾರವಾಗಿದೆ. ಶಾಸಕರು ತುಘಲಕ್ ದರ್ಬಾರ್ ಮಾಡುತ್ತಿರುವುದು ಖಂಡನೀಯ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಇನ್ನೂ ಶಾಸಕರಿಗೆ ಈಗಾಗಲೇ ಗ್ರಾಮ ಪಂಚಾಯಿತಿ, ನಗರಸಭೆ ಚುನಾವಣೆಯಲ್ಲಿ ಮತದಾರರು ಬುದ್ಧಿ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಾದರೂ ಶಿಷ್ಟಾಚಾರವನ್ನು ಪಾಲಿಸಿಕೊಂಡು ಕೆಲಸ ಮಾಡಲಿ ಎಂದು ಸೂಚಿಸಿದರು.

Last Updated : Jan 29, 2021, 7:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.