ETV Bharat / state

ಚಿಕ್ಕಬಳ್ಳಾಪುರ: 10ಕ್ಕೂ ಹೆಚ್ಚು ಮೈನಾ ಹಕ್ಕಿಗಳ ಸಾವು, ಕಾರಣ ನಿಗೂಢ

ರಾಯಪ್ಪನಹಳ್ಳಿಯ ಸುಮಾರು ಕೆಲವು ಕಡೆಗಳಲ್ಲಿ 10ಕ್ಕೂ ಅಧಿಕ ಮೈನಾ ಹಕ್ಕಿಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿವೆ.

author img

By

Published : Feb 18, 2022, 10:24 AM IST

myna birds died in chikkaballapur
ಚಿಕ್ಕಬಳ್ಳಾಪುರದಲ್ಲಿ ಮೈನಾ ಹಕ್ಕಿಗಳ ಸಾವು

ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ಶಿಡ್ಲಘಟ್ಟ ತಾಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಪ್ಪನಹಳ್ಳಿಯ ಮೂರ್ನಾಲ್ಕು ಕಡೆಗಳಲ್ಲಿ 10ಕ್ಕೂ ಹೆಚ್ಚು ಮೈನಾ ಹಕ್ಕಿಗಳು ನಿಗೂಢವಾಗಿ ಸಾವನ್ನಪ್ಪಿವೆ. ಪಕ್ಷಿಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ‌.

ಹತ್ತಿರದಲ್ಲಿ ಯಾವುದೇ ವಿದ್ಯುತ್ ತಂತಿಗಳಿಲ್ಲ. ಹಕ್ಕಿಗಳನ್ನು ಬೇಟೆಯಾಡಿರುವ ಕುರುಹುಗಳೂ ಇಲ್ಲ. ಯಾವುದಾದರೂ ವೈರಸ್​ನಿಂದ ಮೃತಪಟ್ಟಿವೆಯಾ, ಅಕಸ್ಮಾತ್ ಇವುಗಳಿಗೆ ವೈರಸ್ ತಗುಲಿದ್ದರೆ ಅದು ಮನುಷ್ಯರಿಗೆ ಹರಡಬಹುದೇ? ಎಂಬುದನ್ನು ತಜ್ಞರು ಖಚಿತಪಡಿಸಬೇಕಿದೆ. ಕೇವಲ ಮೈನಾ (ಗೊರವಂಕ) ಹಕ್ಕಿಗಳೇ ಏಕೆ ಸಾಯುತ್ತಿವೆ? ಎಂಬುದು ಸಹ ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ: ರಾಯಚೂರು: ಚಿನ್ನದ ಗಣಿಯಲ್ಲಿ ಕಲ್ಲು ಬಿದ್ದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ

ರಾಯಪ್ಪನಹಳ್ಳಿಯಲ್ಲಿ ಸತ್ತಿ ರೆಡ್ಡಿ ಎಂಬವರು ಈ ಹಕ್ಕಿಗಳು ಸತ್ತಿರುವುದನ್ನು ಕಂಡು ಒಂದೆರಡು ಕಡೆ ಹೂತು ಮಣ್ಣು ಮುಚ್ಚಿದ್ದಾರೆ. ಈ ಹಕ್ಕಿಗಳ ನಿಗೂಢ ಸಾವಿನ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿರುವುದಲ್ಲದೇ, ಕಳೆದ ಒಂದೆರಡು ತಿಂಗಳಿನಿಂದ ಈ ಭಾಗದಲ್ಲಿ ಶೇ. 80ರಷ್ಟು ಕಾಗೆಗಳು ಕಣ್ಮರೆಯಾಗಿವೆ ಎಂಬ ಮತ್ತೊಂದು ಆತಂಕದ ಸಂಗತಿ ಸಹ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.