ETV Bharat / bharat

ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬಂಗಾಳಿ ಭಾಷೆಗಳಿಗೂ ಶಾಸ್ತ್ರೀಯ ಸ್ಥಾನಮಾನ - classical languages - CLASSICAL LANGUAGES

ಈಗಾಗಲೇ ತಮಿಳು, ಸಂಸ್ಕೃತ, ಕನ್ನಡ, ಮಲಯಾಳಂ ಹಾಗೂ ಒಡಿಯಾ ಭಾಷೆಗಳಿಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆ ಸ್ಥಾನ ನೀಡಿದೆ. ಇದೀಗ ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬಂಗಾಳಿ ಭಾಷೆಗಳಿಗೂ ಶಾಸ್ತ್ರೀಯ ಸ್ಥಾನಮಾನ ಘೋಷಿಸಿದೆ.

Empowering employment: The role of classical languages in job creation
ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬಂಗಾಳಿ ಭಾಷೆಗಳಿಗೂ ಶಾಸ್ತ್ರೀಯ ಸ್ಥಾನಮಾನ: ಉದ್ಯೋಗ ಸೃಷ್ಟಿಯಲ್ಲಿ ಇದರ ಪಾತ್ರ ಏನು? (IANS)
author img

By ETV Bharat Karnataka Team

Published : Oct 4, 2024, 6:59 AM IST

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸಿದೆ. ಈ ಭಾಷೆಗಳು ಈಗಾಗಲೇ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದಿರುವ ಇತರ ಆರು ಭಾಷೆಗಳ ಗುಂಪಿಗೆ ಸೇರ್ಪಡೆ ಆಗುತ್ತವೆ. ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾ ಭಾಷೆಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆಗಳೆಂದು ಘೋಷಿಸಿದೆ.

ಮಹಾರಾಷ್ಟ್ರ (ಮರಾಠಿ), ಬಿಹಾರ, ಉತ್ತರ ಪ್ರದೇಶ, ಮತ್ತು ಮಧ್ಯಪ್ರದೇಶ (ಪಾಲಿ ಮತ್ತು ಪ್ರಾಕೃತ), ಪಶ್ಚಿಮ ಬಂಗಾಳ (ಬಂಗಾಳಿ), ಮತ್ತು ಅಸ್ಸಾಂ (ಅಸ್ಸಾಮಿ)ಭಾಷೆಗಳನ್ನು ಇನ್ಮುಂದೆ ಶಾಸ್ತ್ರೀಯ ಭಾಷೆಗಳೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ . ಈ ಮನ್ನಣೆಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾಗಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಣಾಮಗಳು ಪ್ರತಿಧ್ವನಿಸಲು ಸಹಕಾರಿಯಾಗಿದೆ.

ಶಾಸ್ರ್ತೀಯ ಭಾಷಾ ಘೋಷಣೆಯಿಂದಾಗುವ ಪ್ರಯೋಜನಗಳೇನು?: ಈ ಶಾಸ್ತ್ರೀಯ ಭಾಷೆಗಳನ್ನು ಬೆಂಬಲಿಸಲು, ಶಿಕ್ಷಣ ಸಚಿವಾಲಯವು ಶಾಸ್ತ್ರೀಯ ಭಾಷೆಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳು, ವಿಶ್ವವಿದ್ಯಾನಿಲಯಗಳಲ್ಲಿ ಪೀಠಗಳ ಸ್ಥಾಪನೆ ಮತ್ತು ಈ ಭಾಷೆಗಳ ಪ್ರಚಾರಕ್ಕಾಗಿ ಮೀಸಲಾದ ಕೇಂದ್ರಗಳ ರಚನೆಯಂತಹ ಪ್ರಯೋಜನಗಳನ್ನು ಒದಗಿಸುತ್ತದೆ.

ಈ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡುವುದರ ಪ್ರಮುಖ ಪ್ರಯೋಜನ ಎಂದರೆ ಉದ್ಯೋಗ ಸೃಷ್ಟಿ ಮಾಡುವುದಾಗಿದೆ. ಭಾಷೆಗಳನ್ನು ಶಾಸ್ತ್ರೀಯ ಭಾಷೆಯಾಗಿ ಸೇರಿಸುವುದರಿಂದ ವಿಶೇಷವಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಮನಾರ್ಹ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದಲ್ಲದೇ, ಈ ಭಾಷೆಗಳ ಪ್ರಾಚೀನ ಪಠ್ಯಗಳ ಸಂರಕ್ಷಣೆ, ದಾಖಲೀಕರಣ ಮತ್ತು ಡಿಜಿಟಲೀಕರಣ, ಅನುವಾದ, ಪ್ರಕಾಶನ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ಶಿಕ್ಷಣ ಸಚಿವಾಲಯ ಕೈಗೊಂಡ ಉತ್ತೇಜನಗಳೇನು?: ಶಿಕ್ಷಣ ಸಚಿವಾಲಯವು ಶಾಸ್ತ್ರೀಯ ಭಾಷೆಗಳನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ 2020ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ಮೂರು ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ.

ಪ್ರಾಚೀನ ತಮಿಳು ಪಠ್ಯಗಳ ಅನುವಾದವನ್ನು ಸುಗಮಗೊಳಿಸಲು, ಸಂಶೋಧನೆಯನ್ನು ಉತ್ತೇಜಿಸಲು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮತ್ತು ತಮಿಳಿನ ಭಾಷಾ ವಿದ್ವಾಂಸರಿಗೆ ಕೋರ್ಸ್‌ಗಳನ್ನು ನೀಡಲು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು ಸ್ಥಾಪಿಸಲಾಗಿದೆ.

ಶಾಸ್ತ್ರೀಯ ಭಾಷೆಗಳ ಅಧ್ಯಯನ ಮತ್ತು ಸಂರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸಲು, ಮೈಸೂರಿನಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್‌ನ ಆಶ್ರಯದಲ್ಲಿ ಶಾಸ್ತ್ರೀಯ ಕನ್ನಡ, ತೆಲುಗು, ಮಲಯಾಳಂ ಮತ್ತು ಒಡಿಯಾದಲ್ಲಿ ಅಧ್ಯಯನಕ್ಕಾಗಿ ಶ್ರೇಷ್ಠತೆಯ ಕೇಂದ್ರಗಳನ್ನು ಈಗಾಗಲೇ ಸ್ಥಾಪನೆ ಮಾಡಲಾಗಿದೆ.

ಈ ಉಪಕ್ರಮಗಳ ಜೊತೆಗೆ, ಶಾಸ್ತ್ರೀಯ ಭಾಷಾ ಕ್ಷೇತ್ರದಲ್ಲಿನ ಸಾಧನೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಸ್ಥಾಪಿಸಲಾಗಿದೆ.

ಇದನ್ನು ಓದಿ:ಜಮ್ಮು ಕಾಶ್ಮೀರ: ವರ್ಷಾಂತ್ಯಕ್ಕೆ ಪಂಚಾಯತ್​​, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ? - Jammu Kashmir Local Body Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.