ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥಕ್ಕೆ ಸಿಎಂ ಆಗಮನದ ಹಿನ್ನೆಲೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದ್ದು, ಮಂಗಗಳ ಹಾವಳಿ ತಪ್ಪಿಸಲು ಚಿಂಪಾಂಜಿ ವೇಷಧಾರಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.
ಕಾರ್ಯಕ್ರಮದ ಆವರಣದ ಮರಗಳಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು ಮಂಗಗಳನ್ನು ಓಡಿಸಲು ಸ್ಥಳೀಯ ಸಿಬ್ಬಂದಿ ಸಖತ್ ಪ್ಲಾನ್ ಮಾಡಿದ್ದು, ಚಿಂಪಾಜಿ ವೇಷಧಾರಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಿ ಮಂಗಗಳನ್ನು ಓಡಿಸಲು ಹರಸಾಹಸ ಪಡುವಂತಾಗಿದೆ.
75ನೇ ಸ್ವಾತಂತ್ರ್ಯೋತ್ಸವದ ಆಜಾದಿ ಅಮೃತ ಮಹೋತ್ಸವಕ್ಕೆ ಮುಖ್ಯಮಂತ್ರಿಗಳು ವಿಧುರಾಶ್ವತ್ಥದಲ್ಲಿ ಚಾಲನೆ ನೀಡಲಿದ್ದಾರೆ.