ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿದಕ್ಕೆ ಸಚಿವ ಕೆ.ಸುಧಾಕರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಖಾತೆಯ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಖಾತೆ ವಹಿಸಿಕೊಂಡ ಬಳಿಕ ಇದೇ ಮೋದಲ ಬಾರಿಗೆ ಜಿಲ್ಲಗೆ ಭೇಟಿ ನೀಡಿದ್ದಾರೆ.
ಗೌರಿಬಿದನೂರಿನಲ್ಲಿ ಎರಡು ಕುಟುಂಬಗಳ 12 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. 12ರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 3 ಮಂದಿ ಗುಣಮುಖರಾಗಿದ್ದಾರೆ. 8 ಮಂದಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲೆಯಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು. ಇನ್ನು ಆಲಿಕಲ್ಲು ಮಳೆಯಿಂದ ತರಕಾರಿ ಮತ್ತು ದ್ರಾಕ್ಷಿ ನಾಶವಾಗಿದ್ದು, ಎಷ್ಟು ನಷ್ಟವಾಗಿದೆ ಅದಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
14ರ ನಂತರ ಲಾಕ್ಡೌನ್ ಮುಂದುವರೆಯುವ ಬಗ್ಗೆ ನಾಳೆ ಗೊತ್ತಾಗಲಿದೆ. 14ರ ನಂತರ ಲಾಕ್ಡೌನ್ ಬಗ್ಗೆ ನಾಳೆ ಎಲ್ಲಾ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿಗಳು ಮಾತನಾಡಲಿದ್ದಾರೆ ಎಂದರು. ನಂತರ ಶಿಡ್ಲಘಟ್ಟ ನಗರಕ್ಕೆ ಭೇಟಿ ಕೊಟ್ಟು ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಿದರು.