ETV Bharat / state

ಚಂದ್ರಗ್ರಹಣ: ಐತಿಹಾಸಿಕ ಪ್ರಸಿದ್ದ ಭೋಗನಂದೀಶ್ವರ ದೇವಸ್ಥಾನ ಪ್ರವೇಶ ನಿಷೇಧ

ಗ್ರಹಣ ಸಮಯದಲ್ಲಿ ದೇವರನ್ನು ದರ್ಭೆಯಿಂದ ಬಂಧನದಲ್ಲಿಡಲಾಗುತ್ತದೆ. ಮೋಕ್ಷವಾದ ನಂತರ ದೇವಸ್ಥಾನ ಶುಭ್ರಗೊಳಿಸಿ ಭೋಗನಂದೀಶ್ವರನಿಗೆ ಅಭಿಷೇಕ ಮಾಡಲಾಗುವುದು ಎಂದು ಅರ್ಚಕರು ತಿಳಿಸಿದರು.

Bhoganandeeswara Temple
ಭೋಗನಂದೀಶ್ವರ ದೇವಸ್ಥಾನ
author img

By

Published : Nov 8, 2022, 9:01 AM IST

ಚಿಕ್ಕಬಳ್ಳಾಪುರ: ಇಂದು ರಾಹುಗ್ರಸ್ತ ಚಂದ್ರಗ್ರಹಣ ನಡೆಯಲಿದೆ. ಗ್ರಹಣ ಕಾಲದಲ್ಲಿ ಇಲ್ಲಿನ ಪುರಾಣ ಪ್ರಸಿದ್ಧ ಭೋಗನಂದಿಶ್ವರ ದೇವಸ್ಥಾನ ಬಾಗಿಲುಗಳನ್ನು ಮುಚ್ಚಲಾಗುತ್ತಿದ್ದು, ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ದೇವಸ್ಥಾನ ಪ್ರಧಾನ ಅರ್ಚಕರು ತಿಳಿಸಿದ್ದಾರೆ.

ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಾಥ್​ ಶರ್ಮಾ

ಮಧ್ಯಾಹ್ನ 2.20 ರಿಂದ 6.19 ರವರೆಗೆ ಗ್ರಹಣಕಾಲ ಇರಲಿದೆ. ನಂದಿಯ ದೇವಸ್ಥಾನದಲ್ಲಿ 12 ಗಂಟೆಯಿಂದಲೇ ವಿಶೇಷ ಪೂಜೆಗಳನ್ನು ಮಾಡಲಾಗುವುದು. ತದನಂತರ ದರ್ಭೆಯಿಂದ ಗರ್ಭಗುಡಿಯನ್ನು ಬಂಧನ ಮಾಡಲಾಗುತ್ತದೆ. ಸಂಜೆ 6.19ಕ್ಕೆ ಗ್ರಹಣ ಮೋಕ್ಷವಾಗಲಿದೆ. ಬಳಿಕ ದೇಗುಲ ಶುಭ್ರಗೊಳಿಸಿ ಭೋಗನಂದಿಶ್ವರನಿಗೆ ಅಭಿಷೇಕ ನಡೆಯಲಿದೆ. ಗ್ರಹಣದ‌ ಸಮಯದಲ್ಲಿ ವೃದ್ಧರು, ಅಂಗವಿಕಲರು, ಮಕ್ಕಳು, ಅಶಕ್ತರು ಊಟ ಮಾಡಿಕೊಳ್ಳಬಹುದು. ಗ್ರಹಣ ಮಂತ್ರವನ್ನು ಜಪಿಸುವಂತೆಯೂ ಅರ್ಚಕರು ಹೇಳಿದರು.

ಇದನ್ನೂ ಓದಿ: ಇಂದು ಚಂದ್ರಗ್ರಹಣ, ಬಹುತೇಕ ದೇಗುಲಗಳು ಬಂದ್​: ಭರಣಿ ನಕ್ಷತ್ರ, ಮೇಷ ರಾಶಿಯವರಿಗೆ ತೊಂದರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.