ETV Bharat / state

ಕ್ಷೌರಿಕರು ಹಾಗೂ ಅಗಸರಿಗೆ ಸಹಾಯಧನ ನೀಡಲು ವಿಳಂಬವಾಗಿದೆ: ಸಚಿವ ಶಿವರಾಮ್ ಹೆಬ್ಬಾರ್​

author img

By

Published : Jul 6, 2020, 10:42 PM IST

ಕಾರ್ಮಿಕರನ್ನ ಕೆಲಸದಿಂದ ತೆಗೆಯುತ್ತಿದ್ದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಕೊರೊನಾದಿಂದ ಸಾಕಷ್ಟು ಕಾರ್ಖಾನೆಗಳು ಬಂದ್ ಆಗಿವೆ. ಮಾರ್ಚ್, ಏಪ್ರಿಲ್ ತಿಂಗಳು ಸರಿಯಾಗಿ ಸಂಬಳ ಆಗಿದೆ. ಆದರೆ ಮೇ, ಜೂನ್ ಎರಡು ತಿಂಗಳು ಸಂಬಳ ಆಗಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.

Labor Minister Shivaram Hebbar statement
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಚಿಕ್ಕಬಳ್ಳಾಪುರ: ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕರು ಹಾಗೂ ಅಗಸರ ಮಾಹಿತಿ ನಮ್ಮ‌ ಕಡೆ ಇರಲಿಲ್ಲ. ಆದ್ದರಿಂದ ಸರ್ಕಾರದಿಂದ ಸಿಗುವ ಸಹಾಯಧನ ವಿಳಂಬವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ನಗರದಲ್ಲಿ ಕ್ಷೌರಿಕರು ಹಾಗೂ ಅಗಸರಿಗೆ ಸಹಾಯಧನ ವಿತರಿಸಿ ಮಾತನಾಡಿದ ಅವರು, ಬಡವರಿಗೆ ತ್ವರಿತಗತಿಯಲ್ಲಿ‌ ಕೆಲಸಗಳು ಆಗಬೇಕಿದ್ದು, ಕ್ಷೌರಿಕರಿಗೆ ಹಾಗೂ ಅಗಸರಿಗೆ ಹಣವನ್ನು ಕೊಡಲಾಗಿದೆ. ಇನ್ನು ಕೇವಲ ಎರಡು ಸಾವಿರ ಜನರಿಗೆ ಮಾತ್ರ ಕೊಡಬೇಕಿದೆ ಎಂದರು.

ಸರ್ಕಾರದ ಘೋಷಣೆಗಳು ಸಂಪೂರ್ಣವಾಗಿ ಈಡೇರಿವೆ. ಆದರೆ ಆಟೋ, ಟ್ಯಾಕ್ಸಿ, ಕ್ಷೌರಿಕ ಹಾಗೂ ಅಗಸರ ಡೇಟಾ ನಮ್ಮ‌ ಕಡೆ ಇರಲಿಲ್ಲ. ಬಿಬಿಟಿ ಮೂಲಕ ಹಣ ಜಮಾವಣೆ ಆಗಬೇಕಿದೆ. ಹಾಗಾಗಿ ಸ್ವಲ್ಪ ವಿಳಂಬ ಆಗಿದ್ದು, ನಮ್ಮಲ್ಲಿ ಇದ್ದ ಡೇಟಾಗಳಿಗೆ ವಿಳಂಬ ಆಗದೆ ಅಕೌಂಟ್ ಥ್ರೂ ಹಣ ಜಮಾ ಆಗಿದೆ ಎಂದು ತಿಳಿಸಿದರು.

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಕಾರ್ಮಿಕರನ್ನ ಕೆಲಸದಿಂದ ತೆಗೆಯುತ್ತಿದ್ದ ಬಗ್ಗೆ ಸಾಕಷ್ಟು ದೊಡ್ಡ ಮಟ್ಟದ ದೂರುಗಳು ಬಂದಿವೆ. ಕೊರೊನಾದಿಂದ ಸಾಕಷ್ಟು ಕಾರ್ಖಾನೆಗಳು ಬಂದ್ ಆಗಿವೆ. ಮಾರ್ಚ್, ಏಪ್ರಿಲ್ ತಿಂಗಳು ಸರಿಯಾಗಿ ಸಂಬಳ ಆಗಿದೆ. ಆದರೆ ಮೇ, ಜೂನ್ ಎರಡು ತಿಂಗಳು ಸಂಬಳ ಆಗಿಲ್ಲ ಎಂದರು. ಮಾಲೀಕರು ಸ್ವಲ್ಪ ವಿಳಂಬ ಆಗಿದೆ ಅಂತ ಹೇಳಿದ್ದಾರೆ. ಸರ್ಕಾರದ ಮುಂದೆ ಎರಡು ಆಯ್ಕೆಗಳಿದ್ದು, ನಾವು ಇಂಡಸ್ಟ್ರಿ ವಿರೋಧಿ ಆಗೋದಕ್ಕೆ ಆಗಲ್ಲ ಎಂದರು. ಮೊದಲು 70 % ಬಾಕಿ ಇದ್ದ ಸಂಬಳ, 50% ಕ್ಕೆ ಇಳಿದಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸಿದ್ದು, ಕಷ್ಟ ನಷ್ಟ ಇಬ್ಬರಿಗೂ ಆಗಿದೆ ಎಂದು ತಿಳಿಸಿದರು.

ಗಾರ್ಮೆಂಟ್ಸ್ ಕಾರ್ಖಾನೆ ಹೆಣ್ಣು ಮಕ್ಕಳು ಕಣ್ಣೀರು ಹಾಕಿದ್ದಾರೆ. ವಿದೇಶಗಳಿಗೆ ವಸ್ತುಗಳು ರಫ್ತು ಆಗುತ್ತಿಲ್ಲ. ಇದರಿಂದ ರಾಜ್ಯಕ್ಕೆ ಸಂಕಷ್ಟ ಎದುರಾಗಿದೆ. ಕಳಿಸಿದ ದಾಸ್ತಾನಿಗೂ ಹಣ ಬಂದಿಲ್ಲ. ಉದ್ಯೋಗಸ್ಥರು, ಕಾರ್ಮಿಕರು, ಮಾಲೀಕರ ಮಧ್ಯೆ ಸಮನ್ವಯ ಕಾಪಾಡಬೇಕಿದೆ. ಕಾರ್ಮಿಕರ ರಕ್ಷಣೆ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಎಸ್ಎಸ್ಎಲ್ ವಿದ್ಯಾರ್ಥಿಗಳು ಬಹಳ ಧೈರ್ಯದಿಂದ ಪರೀಕ್ಷೆ ಎದುರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ ಸಚಿವರು, ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಧ್ಯಮದವರು ಕೊರೊನಾ ಬಗ್ಗೆ ಜನರಲ್ಲಿ ಆತಂಕ ಮೂಡಿಸದೆ, ಎಚ್ಚರಿಕೆ ಕೊಡಬೇಕಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.