ಚಿಕ್ಕಬಳ್ಳಾಪುರ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಉಪಚುನಾವಣೆ ಫಲಿತಾಂಶಕ್ಕೂ ಮುನ್ನವೇ ಅದೃಷ್ಟ ಕೈಹಿಡಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು, ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಬೋಗನಂದೀಶ್ವರ ದೇವಾಲಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಧಾಕೃಷ್ಣ ಅವರ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ವೇಳೆ ದೇವರು ಕುಮಾರಸ್ವಾಮಿಗೆ ಬಲಭಾಗದಿಂದ ಹೂವು ನೀಡಿದ್ದು, ಇದು ವಿಸ್ಮಯ ಮತ್ತು ಅದೃಷ್ಟದ ಸಂಕೇತವೆಂದು ಜೆಡಿಎಸ್ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಕುಮಾರಸ್ವಾಮಿ ಪ್ರಾರ್ಥನೆಗೆ ಬೋಗ ನಂದೀಶ್ವರ ಸ್ವಾಮಿ ಅಸ್ತು ಎಂದಿದ್ದಾನೆ. ಅಲ್ಲದೆ, ಬಲಭಾಗದಿಂದ ಹೂವು ಕೊಟ್ಟು ಆಶೀರ್ವದಿಸಿದ್ದಾನೆ ಎಂಬ ಚರ್ಚೆ ಈ ಭಾಗದಲ್ಲಿ ನಡೆಯುತ್ತಿದೆ. ಈ ವೇಳೆ ಬೋಗ ನಂದೀಶ್ವರನ ಆಶೀರ್ವಾದಕ್ಕೆ ಹೆಚ್ಡಿಕೆ ತಲೆಬಾಗಿದ್ದಾರೆ.
ಜೆಡಿಎಸ್ ಅಭ್ಯರ್ಥಿ ರಾಧಾಕೃಷ್ಣ ಪರ ಪ್ರಚಾರಕ್ಕೆ ಆಗಮಿಸಿರುವ ಹೆಚ್ ಡಿ ಕುಮಾರಸ್ವಾಮಿಗೆ ಮಾಜಿ ಶಾಸಕ ಕೆ ಪಿ ಬಚ್ಚೇಗೌಡ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಾಥ್, ವಿಧಾನಸಭೆ ಉಪಾಧ್ಯಕ್ಷ ಜೆ ಕೆ ಕೃಷ್ಣಾರೆಡ್ಡಿ ಸಾಥ್ ನೀಡಿದ್ರು.