ಚಿಕ್ಕಬಳ್ಳಾಪುರ : ಜಿಲ್ಲೆಗೆ ಇದುವರೆಗೂ ಕನಕಭವನ ಇಲ್ಲ. ಚುನಾವಣೆ ಮುಗಿದ ನಂತರ ಕನಕಭವನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು, ತಾಲೂಕಿನ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿ ಶ್ರಮಿಸಲಾಗುವುದೆಂದು ಕೆ. ಎಸ್. ಈಶ್ವರಪ್ಪ ತಿಳಿಸಿದರು.
ಉಪಚುನಾವಣೆ ನಡೆಯುತ್ತಿರುವುದು ಮುಂದಿನ ಮೂರುವರೆ ವರ್ಷಗಳ ಅಭಿವೃದ್ಧಿಗಾಗಿ. ಸುಭಧ್ರ ಸರ್ಕಾರ ಬೇಕು, ಹಿಂದುಳಿದ ವರ್ಗಗಳು, ದಲಿತರು ಎಲ್ಲಾ ವರ್ಗದವರು ಬಿಜೆಪಿ ಪರವಿದ್ದಾರೆ. ಕ್ಷೇತ್ರದಲ್ಲಿ ಸುಧಾಕರ್ ಪರ ನಿರೀಕ್ಷೆಗೂ ಮೀರಿ ಜನ ಬೆಂಬಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ ಮೈತ್ರಿ ಸರ್ಕಾರದಲ್ಲಿ ಕಿತ್ತಾಟದ ಕಾರಣ ಜನತೆ ಸುಭದ್ರ ಸರ್ಕಾರವನ್ನು ಬಯಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಗೆದ್ದು ಬಿಜೆಪಿ ಪೂರ್ಣ ಪ್ರಮಾಣದ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದರು.