ಬಾಗೇಪಲ್ಲಿ: ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲಿಂಪಲ್ಲಿ ಗ್ರಾಮದಲ್ಲಿ ರಾಸುಗಳ ಮೈ ಮೇಲೆ ಬೊಬ್ಬೆಗಳು ಎದ್ದು, ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತಿದೆ.
ಈ ರೋಗ ಒಂದರಿಂದ ಮತ್ತೊಂದು ರಾಸುವಿಗೆ ಹರಡುತ್ತಿದೆ. ರೈತರು ಮಳೆಗಾಲದಲ್ಲಿ ಉತ್ತಮ ಮೇವು ಸಿಗುತ್ತದೆ ಎಂದು ಹಸುಗಳನ್ನು ಸಾಕಿ ಜೀವನ ಕಟ್ಟಿಕೊಳ್ಳಲು ಮುಂದಾಗಿದ್ದರು. ಆದರೆ ರಾಸುಗಳಿಗೆ ರೋಗ ತಗುಲಿರುವುದು ಈಗ ಅನ್ನದಾತರ ಆತಂಕಕ್ಕೆ ಕಾರಣವಾಗಿದೆ.
ಪಶುವೈದ್ಯರು ಸೂಕ್ತ ಚಿಕಿತ್ಸೆ ನೀಡಿ ರೈತರಿಗೆ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ. ಆದರೆ ಪಶು ಇಲಾಖೆ ಅಧಿಕಾರಿಗಳು ಒಂದು ಚುಚ್ಚು ಮದ್ದಿಗೆ ಇಂತಿಷ್ಟು ಎಂದು ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪ ಸಹ ಕೇಳಿ ಬಂದಿದೆ.