ಚಿಕ್ಕಬಳ್ಳಾಪುರ: ಅನರ್ಹ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸೂಚನೆ ಮೊದಲೇ ನೀಡಿದ್ರು. ಈಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಲ್ಲಿ ಏನೂ ವಿಶೇಷತೆಯಿಲ್ಲ ಎಂದು ಉಪಸಭಾಧ್ಯಕ್ಷ ಹಾಗೂ ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ ಹೇಳಿದ್ದಾರೆ.
ಮೊದಲಿನಿಂದಲೂ ಅನರ್ಹ ಶಾಸಕರ ಜೊತೆ ಬಿಜೆಪಿ ನಾಯಕರು ಸಂಪರ್ಕ ಬೆಳಿಸಿಕೊಂಡಿದ್ದರು. ಅನರ್ಹರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಸಲುವಾಗಿಯೇ ರಾಜೀನಾಮೆ ನೀಡಿದ್ರು. ಸುಪ್ರೀಂ ತೀರ್ಪನ್ನು ಸ್ವಾಗತ್ತಿಸುತ್ತೇವೆ, ಆದರೆ ಚುನಾವಣಾ ಫಲಿತಾಂಶ ಬಂದ ಮೇಲೆ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದರು ಎಂದು ತಿಳಿಯಲಿದೆ. ಸದ್ಯ ಈಗ ಅದು ಮುಗಿದಿರುವ ಕತೆ ಎಂದಿದ್ದಾರೆ.
ಉಪಚುನಾವಣೆಗೆ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ. ಸದ್ಯ ನಗರಸಭೆ ಚುನಾವಣೆಯಲ್ಲಿ ಕೆಲಸ ಕಾರ್ಯಗಳು ಇದ್ದಿದ್ದರಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಘೋಷಿಸಲು ಸಾಧ್ಯವಾಗಲಿಲ್ಲ. ಚಿಕ್ಕಬಳ್ಳಾಪುರ ಉಪಚುನಾವಣೆ ಅಭ್ಯರ್ಥಿಯ ಬಗ್ಗೆ ಇಂದು ಚರ್ಚಿಸಲಾಗುವುದು ಎಂದು ತಿಳಿಸಿದ್ರು.
ಬಿಜೆಪಿ ಶಕ್ತಿ ಚಿಂತಾಮಣಿ ಕ್ಷೇತ್ರದಲ್ಲಿ ಇಲ್ಲ:
ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಶೂನ್ಯ ಸ್ಥಾನಗಳನ್ನು ಪಡೆದುಕೊಂಡಿದ್ದು, ಕ್ಷೇತ್ರದ ಸಂಸದರಿಗೆ ಭಾರಿ ಮುಖಭಂಗವಾಗಿದೆ. ಸದ್ಯ ಈ ಬಗ್ಗೆ ಉತ್ತರಿಸಿದ ಎಂ.ಕೃಷ್ಣಾರೆಡ್ಡಿ ಅವರು ಚಿಂತಾಮಣಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಯಾವುದೇ ಬೆಂಬಲವಿಲ್ಲವೆಂದು ಗೊತ್ತಿದ್ರು, ಪ್ರಚಾರ ಮಾಡಿದ್ದಾರೆ. ಇದು ಅವರಿಗೂ ಗೊತ್ತಿತ್ತು ಎಂದರು.