ಚಿಕ್ಕಬಳ್ಳಾಪುರ: ಒಂದೆಡೆ ಮಳೆಯಿಂದ ಜನ ಸಂತಸ ವ್ಯಕ್ತಡಿಸಿದರೆ, ಇನ್ನೊಂದೆಡೆ ಮಳೆ ನೀರು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ವಾಹನ ಸವಾರರು ಹರಸಾಹಸ ಪಟ್ಟಿದ್ದಾರೆ.
ಸದ್ಯ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಉತ್ತಮ ಮಳೆಯಾಗಿ ಮುಖ್ಯರಸ್ತೆಗಳು ಕೆರೆಗಳಂತಾಗಿವೆ. ಶಿಡ್ಲಘಟ್ಟಕ್ಕೆ ಹೋಗುವ ಮುಖ್ಯ ರಸ್ತೆ ಸಂಜೆ ಬಿದ್ದ ಮಳೆಗೆ ಕೆರೆಕುಂಟೆಗಳಂತಾಗಿದ್ದು ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ. ನೀರು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ನಿಂತಿದ್ದು ಕಾರೊಂದು 3 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಕೂಡ ನಡೆದಿದೆ.
ಇನ್ನೂ ಮಳೆ ಬಂದಾಗಲ್ಲೆಲ್ಲಾ ಈ ರಸ್ತೆ ಪರಿಸ್ಥಿತಿ ತುಂಬಾ ಹದಗೆಡುತ್ತಿದ್ದು ಸಾಕಷ್ಟು ಅಪಘಾತಗಳು ಸಂಭವಿಸಿವೆ ಎನ್ನಲಾಗಿದೆ. ಅಧಿಕಾರಿಗಳು ಮಾತ್ರ ಚರಂಡಿಗಳನ್ನು ಸ್ವಚ್ಛಗೊಳಿಸದೆ, ಕೈಕಟ್ಟಿ ಕುಳಿತಿರುವುದು ಸಾರ್ವಜನಿಕರಿಗೆ, ವಾಹನ ಸವಾರರಿಗೆ ಬೇಸರವನ್ನು ತಂದಿದೆ.