ETV Bharat / state

‘ನಾನಿರುವುದೇ ನಿಮಗಾಗಿ’.. ಅಣ್ಣಾವ್ರ ಹಾಡು ಹೇಳಿ ರಂಜಿಸಿದ ಸಚಿವ ಸುಧಾಕರ್‌ - Grama Vastavya

'ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ' ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ ಸುಧಾಕರ್ 'ನಾನಿರುವುದೇ ನಿಮಗಾಗಿ' ಕನ್ನಡ ಹಾಡನ್ನು ಹೇಳುವ ಮೂಲಕ ಸ್ಥಳೀಯರನ್ನು ರಂಜಿಸುವುದರ ಜೊತೆಗೆ ಕನ್ನಡಾಭಿಮಾನ ಮೆರೆದರು.

Health Minister Sudhakar
ಸಚಿವ ಸುಧಾಕರ್‌
author img

By

Published : Nov 7, 2021, 6:53 AM IST

ಚಿಕ್ಕಬಳ್ಳಾಪುರ: 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮದಲ್ಲಿ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ ಸುಧಾಕರ್ ಕನ್ನಡದಲ್ಲಿ ಹಾಡು ಹೇಳುವ ಮೂಲಕ ಜನರನ್ನು ರಂಜಿಸಿದರು.

ಶನಿವಾರ ತಾಲೂಕಿನ ಪುರ ಗ್ರಾಮದಲ್ಲಿ 'ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ಡಾ. ಕೆ ಸುಧಾಕರ್ ಪಾಲ್ಗೊಂಡಿದ್ದರು. ಈ ವೇಳೆ ಡಾ. ರಾಜ್​ಕುಮಾರ್​ ಅಭಿನಯದ ಮಯೂರ ಸಿನಿಮಾದ 'ನಾನಿರುವುದೇ ನಿಮಗಾಗಿ.. ನಾಡಿರುವುದೇ ನಮಗಾಗಿ' ಎಂಬ ಹಾಡನ್ನು ಹೇಳುವ ಮೂಲಕ ಗ್ರಾಮಸ್ಥರನ್ನು ಹಾಗೂ ಕಾರ್ಯಕರ್ತರನ್ನು ರಂಜಿಸಿದರು.

ಹಾಡು ಹೇಳಿ ರಂಜಿಸಿದ ಸಚಿವ ಸುಧಾಕರ್‌

ಕಾರ್ಯಕ್ರಮದ ನಂತರ ಗ್ರಾಮದ ದಲಿತ ಗಂಗಾಧರ ಎಂಬುವರ ಮನೆಯಲ್ಲಿ ಊಟ ಸವಿದರು. ಈ ವೇಳೆ ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹಾಗೂ ಜಿಲ್ಲಾ ಅರಣ್ಯಾಧಿಕಾರಿ ಅರಸಲನ್ ಮುಂತಾದವರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.