ಗುಡಿಬಂಡೆ: ವಿವಿಧ ಪ್ರದೇಶಗಳಿಂದ ದ್ವಿಚಕ್ರ ವಾಹನಗಳನ್ನು ಖದಿಯುತ್ತಿದ್ದ ಕಳ್ಳನನ್ನು ಗುಡಿಬಂಡೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಗ್ರಾಮದ ನಿವಾಸಿ ಮುಬಾರಕ್ ಪಾಷಾ(20) ಬಂಧಿತ ಆರೋಪಿ.
ಪ್ರಕರಣ ಸಂಬಂಧ ಕಾರ್ಯಾಚರಣೆ ಕೈಗೊಂಡ ಗುಡಿಬಂಡೆ ಪೊಲೀಸ್ ಅಧಿಕಾರಿಗಳಾದ ದಕ್ಷಿಣಾ ಮೂರ್ತಿ ಮತ್ತು ಹನುಮಂತರಾಯಪ್ಪ ಅವರ ತಂಡ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ ಸುಮಾರು 2.30 ಲಕ್ಷ ಮೌಲ್ಯದ 5 ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕಕ್ಷ ಜಿ.ಕೆ.ಮಿಥುನ್ ಕುಮಾರ್, ಡಿವೈಎಸ್ಪಿ ಕೆ.ರವಿಶಂಕರ್ ಮಾರ್ಗದರ್ಶನದಲ್ಲಿ ಗುಡಿಬಂಡೆ ಸರ್ಕಲ್ ಇನ್ಸ್ ಪೆಕ್ಟರ್ ಎಂ.ಎನ್. ಮಂಜುನಾಥ, ಗುಡಿಬಂಡೆ ಸಬ್ ಇನ್ಸ್ ಪೆಕ್ಟರ್ ಗೋಪಾಲ್‍ರೆಡ್ಡಿ, ಸಿಬ್ಬಂದಿ ದಕ್ಷಿಣಾಮೂರ್ತಿ, ಹನುಮಂತರಾಯಪ್ಪ, ಮುನಿರಾಜು, ಸುನಿಲ್‍ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.