ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಡಿ.ಪಾಳ್ಯದ ಬಳಿ ವ್ಯಕ್ತಿ ಶವವೊಂದು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಡಿ.ಪಾಳ್ಯ ನಿವಾಸಿ ಲಕ್ಷ್ಮಿಪತಿ ರಂದಯ(45) ಗುರುತಿಸಲಾಗಿದೆ. ಗ್ರಾಮದ ನಿರ್ಜನ ಪ್ರದೇಶದಲ್ಲಿ ಶವ ಪತ್ತೆಯಾಗಿದ್ದು, ಮೃತ ದೇಹದ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನೂ ಲಕ್ಷ್ಮಿಪತಿ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಆದರೆ ಇಂದು ಮೃತ ದೇಹ ಪತ್ತೆಯಾಗಿದೆ.
ವೃತ್ತಿಯಲ್ಲಿ ಟೈಲರ್ ಆಗಿದ್ದ ಲಕ್ಷ್ಮಿಪತಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಸುದ್ದಿ ಕೇಳಿ ಸ್ಥಳಕ್ಕೆ ಧಾವಿಸಿ ಬಂದ ಲಕ್ಷ್ಮಿಪತಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಸ್ಥಳಕ್ಕೆ ಮಂಚನಹಳ್ಳಿ ಪೊಲೀಸ್ ಅಧಿಕಾರಿ ಎಸ್. ಐ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸಾರ್ವಜನಿಕ ಶವ ಎಂದು ವರದಿ ನೀಡಲಾಗಿದ್ದು, ಇದು ಕೊಲೆಯೋ ಅಥವಾ ಅತ್ಮಹತ್ಯೆಯೋ ಇನ್ನಷ್ಟೇ ತಿಳಿಯಬೇಕಾಗಿದೆ.