ಚಿಕ್ಕಬಳ್ಳಾಪುರ: ಕಳೆದ 15 ದಿನಗಳಿಂದ ಡ್ರೈನೇಜ್ ಸಮಸ್ಯೆ ಎದುರಿಸುತ್ತಿದ್ದರೂ ನಗರಸಭೆ ಅಧಿಕಾರಿಗಳು ಮಾತ್ರ ತಲೆ ತಲೆಕೆಡಿಸಿಕೊಳ್ಳದೆ ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎನ್ನಲಾಗಿದೆ.
ಚಿಂತಾಮಣಿ ನಗರದ ಗಾಂಧಿ ನಗರದ ನಿವಾಸಿಗಳು ಪ್ರತಿನಿತ್ಯ ದುರ್ವಾಸನೆಯಿಂದ ಬಳಲುವಂತಾಗಿದೆ. ಸುಮಾರು 15 ದಿನಗಳ ಹಿಂದೆ ಡ್ರೈನೇಜ್ ಕ್ಲೀನ್ ಮಾಡಲು ಗುಂಡಿ ತಗೆದಿದ್ದು ಇಂದಿಗೂ ಅದನ್ನು ಮುಚ್ಚಿಲ್ಲ.
ಕೊರೊನಾದಿಂದ ನಾವೆಲ್ಲಾ ಮನೆಯಲ್ಲೇ ಇದ್ದೇವೆ, ಈ ದುರ್ವಾಸನೆಯ ಜೊತೆ ಬದುಕಬೇಕಾದ ಅನಿವಾರ್ಯ ಎದುರಾಗಿದೆ ಎಂದು ಇಲ್ಲಿನ ಮಹಿಳೆಯರು ನೋವು ತೋಡಿಕೊಂಡಿದ್ದಾರೆ.