ಚಿಕ್ಕಬಳ್ಳಾಪುರ: 2022ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಗುರುವಾರ ಮಧ್ಯಾಹ್ನ ಪ್ರಕಟಗೊಂಡಿದೆ. ರಾಜ್ಯಾದ್ಯಂತ ಒಟ್ಟು 145 ಮಕ್ಕಳಿಗೆ 625ಕ್ಕೆ 625 ಅಂಕಗಳು ದೊರೆತಿವೆ. ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಐವರು ವಿದ್ಯಾರ್ಥಿಗಳು ಸೇರಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಬಿ.ಜಿ.ಎಸ್ ಅಗಲಗುರ್ಕಿ ಶಾಲೆಯ ಪ್ರೀತಿ ಎಸ್, ಲೀಸಾ ಹೆಚ್.ಸಿ, ಜಯಂತಿ ಬಿ.ಗೌಡ, ಶಿಡ್ಲಘಟ್ಟದ ಬಿ.ಜಿ.ಎಸ್ ಶಾಲೆಯ ಜಿ. ಹರ್ಷಿತಾ ಹಾಗೂ ಗೌರಿಬಿದನೂರಿನ ಬಿ.ಜಿ.ಎಸ್ ಶಾಲೆಯ ತೃಪ್ತಿ ಕೆ.ಸಿ. 625 ಅಂಕಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: ಮೈಸೂರು: ಪರೀಕ್ಷೆಯಲ್ಲಿ ಅನುತೀರ್ಣ ವಿದ್ಯಾರ್ಥಿ ಆತ್ಮಹತ್ಯೆ
ವಿದ್ಯಾರ್ಥಿನಿ ಲಿಷಾ ಹೆಚ್.ಸಿ. ಮಾತನಾಡಿ, 'ಪೋಷಕರು ಮತ್ತು ಶಿಕ್ಷಕರು ನನ್ನ ಸಾಧನೆಗೆ ಕಾರಣ' ಎಂದರು. ವಿದ್ಯಾರ್ಥಿನಿ ಪ್ರೀತಿ.ಎಸ್. ಪ್ರತಿಕ್ರಿಯಿಸಿ, 'ನಮ್ಮ ಶಿಕ್ಷಕರು ನಮ್ಮ ಮೇಲಿಟ್ಟಿದ್ದ ಭರವಸೆಯನ್ನು ಸಾಧಿಸಿ ತೋರಿಸಿದ್ದೇವೆ' ಎಂದರು.