ETV Bharat / state

ಹೊತ್ತಿ ಉರಿದ ಸ್ಕಂದ ಗಿರಿ ಬೆಟ್ಟ: ಬೆಂಕಿಯ ಕೆನ್ನಾಲಿಗೆಗೆ ಗಿಡ-ಮರ ನಾಶ - skandagiri hilla in chikkaballapur

ನಂದಿ ಬೆಟ್ಟದ ಪಕ್ಕದಲ್ಲಿರುವ ಸ್ಕಂದ ಗಿರಿ ಬೆಟ್ಟ ಹೊತ್ತಿ ಉರಿದಿದೆ. ಇದು ಕಿಡಿಗೇಡಿಗಳ ಕೃತ್ಯವೆಂದು ಸ್ಥಳೀಯರು ಆರೋಪಿಸಿದ್ದಾರೆ.

Fire to Skandagiri Hill in chikkaballapur
ಧಗ, ಧಗ ಹೊತ್ತಿ ಉರಿದ ಸ್ಕಂದ ಗಿರಿ ಬೆಟ್ಟ
author img

By

Published : Mar 8, 2020, 5:26 AM IST

ಚಿಕ್ಕಬಳ್ಳಾಪುರ: ಸಿಲಿಕಾನ್ ಸಿಟಿಗೆ ಕೂಗಳತೆ ದೂರದಲ್ಲಿನ ನಂದಿ ಬೆಟ್ಟದ ಪಕ್ಕದಲ್ಲಿರುವ ಸ್ಕಂದ ಗಿರಿ ಬೆಟ್ಟ ಧಗ ಧಗ ಹೊತ್ತಿ ಉರಿದಿದೆ. ಇದು ಕಿಡಿಗೇಡಿಗಳ ಕೃತ್ಯವೆಂದು ಸ್ಥಳೀಯರು ಶಂಕಿಸಿದ್ದಾರೆ.

ಧಗ ಧಗ ಹೊತ್ತಿ ಉರಿದ ಸ್ಕಂದ ಗಿರಿ ಬೆಟ್ಟ

ಇನ್ನು ವಾರಾಂತ್ಯದಲ್ಲಿ, ಈ ಸ್ಥಳಕ್ಕೆ ಟ್ರಕ್ಕಿಂಗ್​ಗಾಗಿ ನೂರಾರು ಜನ ಆಗಮಿಸುತ್ತಾರೆ. ಪ್ರವಾಸಿಗರ ನಿರ್ಲಕ್ಷ್ಯವೋ ಅಥವಾ ಕಿಡಿಗೇಡಿಗಳ ಕೃತ್ಯವೋ ಬೆಂಕಿಯ ಕೆನ್ನಾಲಿಗೆಗೆ ನೂರಾರು ಗಿಡ, ಮರಗಳು ಸುಟ್ಟು ಕರಕಲಾಗಿವೆ.

ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದು, ಇನ್ನೂ ಹತೋಟಿಗೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಬೇಸಿಗೆ ಪ್ರಾರಂಭವಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.