ಚಿಕ್ಕಬಳ್ಳಾಪುರ : ಬೆಳೆದಿದ್ದ ಬೆಳೆಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆ ನೊಂದ ರೈತ ದಂಪತಿ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೊಂಡ್ಲಿಗಾನಹಳ್ಳಿಯಲ್ಲಿ ನಡೆದಿದೆ.
ವೆಂಕಟಸ್ವಾಮಿ(52) ಹಾಗೂ ರತ್ನಮ್ಮ (44) ಮೃತ ರೈತ ದಂಪತಿ. ಸಾಲಸೋಲ ಮಾಡಿ ಇವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಟೊಮ್ಯಾಟೊ ಹಾಗೂ ಒಂದು ಎಕರೆಯಲ್ಲಿ ಕೊತ್ತೊಂಬರಿ ಬೆಳೆದಿದ್ದರು. ಆದರೆ, ಮಾರುಕಟ್ಟೆಯಲ್ಲಿ ಬೆಳೆಗೆ ಉತ್ತಮ ಬೆಲೆ ಸಿಗದ ಹಿನ್ನೆಲೆ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯ ಬ್ಯಾಂಕ್ಗಳಿಂದ 3 ಲಕ್ಷ ಹಾಗೂ ಸ್ಥಳೀಯವಾಗಿ 2 ಲಕ್ಷ ಕೈಸಾಲ ಮಾಡಿಕೊಂಡು ಬೆಳೆಯನ್ನು ಬೆಳೆದಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಬಟ್ಲಹಳ್ಳಿ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ದೇವನಹಳ್ಳಿ : ರನ್ ವೇಯಲ್ಲಿ 3 ಗಂಟೆಗಳ ಕಾಲ ನಿಂತ ಏರ್ ಇಂಡಿಯಾ ವಿಮಾನ