ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದ ದಿವಂಗತ ಎನ್.ಟಿ.ರಾಮರಾವ್ ಅವರ ಪುತ್ರ, ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಹಿಂದೂಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಾಲಕೃಷ್ಣ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ದೃಶ್ಯ ಕಂಡು ಬಂದಿತು.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂದೂಪುರ ಕ್ಷೇತ್ರಕ್ಕೆ ಗೌರಿಬಿದನೂರು ಮಾರ್ಗವಾಗಿ ಹೋಗುತ್ತಿರುವ ಬಗ್ಗೆ ಸುದ್ದಿ ತಿಳಿದ ಸಾವಿರಾರು ಬಾಲಕೃಷ್ಣ ಅಭಿಮಾನಿಗಳು ವಿದುರಾಶ್ವತ್ಥ ಗೇಟ್ ಬಳಿ ರಸ್ತೆಯ ಎರಡೂ ಕಡೆ ನಿಂತು ಸ್ವಾಗತ ಕೋರಿ, ಮಾಲಾರ್ಪಣೆ ಮಾಡಿದರು.
ಅಭಿಮಾನಿಗಳನ್ನು ಕಂಡು ತಕ್ಷಣ ತಮ್ಮ ವಾಹನವನ್ನು ನಿಲ್ಲಿಸಿದ ನಟ, ಜನರ ಅಭಿಮಾನ ಹಾಗೂ ಅವರ ಪ್ರೀತಿಯನ್ನು ಕಂಡು ಎಲ್ಲರಿಗೂ ಕೈ ಮುಗಿದು ನಂತರ ಹಿಂದೂಪುರ ಕಡೆ ಹೊರಟರು.