ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಬಾಗೇಪಲ್ಲಿ ಪಟ್ಟಣದ 4ನೇ ವಾರ್ಡ್ನ ಸೀಲ್ಡೌನ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಲತಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ, ಪರಿಶೀಲಿಸಿದರು.
![District Collector visits the Baghepalli Seal Down area](https://etvbharatimages.akamaized.net/etvbharat/prod-images/kn-ckb-04-dc-visit-av-kac10004_24072020204739_2407f_1595603859_1065.jpg)
ಪಟ್ಟಣದ ಕೊರೊನಾ ನಿರ್ಮೂಲನ ಬೂತ್ ಮಟ್ಟದ ಸಮಿತಿ ತಂಡದ ಕಾರ್ಯವೈಖರಿ ಬಗ್ಗೆ ಪರಿಶೀಲಿಸಿದರು. ಬಳಿಕ ಟಾಸ್ಕ್ ಫೋರ್ಸ್ ಸಮಿತಿಯೊಂದಿಗೆ ಚರ್ಚಿಸಿ, ಕೊರೊನಾ ವಿರುದ್ದ ಹೋರಾಡಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ತಿಳಿಸಿದರು.
ನಂತರ ಪಟ್ಟಣದ 4ನೇ ವಾರ್ಡ್ನ ಮನೆ-ಮನೆಗೂ ತೆರಳಿ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಕೆ ಬಗ್ಗೆ ಅರಿವು ಮೂಡಿಸಿದರು. ಅಲ್ಲದೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯವರ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.