ETV Bharat / state

ಬೀದಿ ನಾಯಿಗಳ ದಾಳಿಗೆ ಚಿಕ್ಕಬಳ್ಳಾಪುರದಲ್ಲಿ ಜಿಂಕೆ ಬಲಿ - ಚಿಕ್ಕಬಳ್ಳಾಪುರ ಲೇಟೆಸ್ಟ್​ ನ್ಯೂಸ್

ಆಹಾರ ಅರಿಸಿ ಬಂದಿದ್ದ ಜಿಂಕೆ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರ ಗ್ರಾಮದ ಹೊರವಲಯದಲ್ಲಿರುವ ತೋಟದಲ್ಲಿ ನಡೆದಿದೆ.

ಬೀದಿ ನಾಯಿಗಳ ದಾಳಿಗೆ ಚಿಕ್ಕಬಳ್ಳಾಪುರದಲ್ಲಿ ಜಿಂಕೆ ಬಲಿ
Deer died by street dog attacks in Chikkaballapur
author img

By

Published : Feb 20, 2021, 12:43 PM IST

ಚಿಕ್ಕಬಳ್ಳಾಪುರ: ಬೀದಿ ನಾಯಿಗಳ ದಾಳಿಯಿಂದ ಜಿಂಕೆಯೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನ ಜಾತವಾರ ಗ್ರಾಮದ ಹೊರವಲಯದಲ್ಲಿರುವ ತೋಟದಲ್ಲಿ ನಡೆದಿದೆ.

ಬೀದಿ ನಾಯಿಗಳ ದಾಳಿಗೆ ಚಿಕ್ಕಬಳ್ಳಾಪುರದಲ್ಲಿ ಜಿಂಕೆ ಬಲಿ

ಕಾಡಿನಿಂದ ಆಹಾರ ಅರಸಿ ಜಾತವಾರದ ತೋಟವೊಂದಕ್ಕೆ ಜಿಂಕೆಗಳ ಹಿಂಡು ಬಂದಿತ್ತು. ಇದರಲ್ಲಿ ಹತ್ತು ತಿಂಗಳ ಜಿಂಕೆಯೊಂದು ತಪ್ಪಿಸಿಕೊಂಡು ತೋಟದಲ್ಲಿ ಓಡಾಡುತ್ತಿತ್ತು. ಇದನ್ನು ಕಂಡ ಬೀದಿ ನಾಯಿಗಳು ಜಿಂಕೆ ಮೇಲೆ ದಾಳಿ ನಡೆಸಿ ಹೊಟ್ಟೆ ಭಾಗವನ್ನು ಸಂಪೂರ್ಣ ಹಾನಿಗೊಳಿಸಿದ್ದವು. ತೀವ್ರವಾಗಿ ಗಾಯಗೊಂಡಿದ್ದ ಜಿಂಕೆ ಇಂದು ಸಾವನ್ನಪ್ಪಿದೆ.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಜಿಂಕೆ ಮೃತದೇಹವವನ್ನು ಮರಣೋತ್ತರ ಪರೀಕ್ಷೆಗೆ ಪಶು ವೈದ್ಯ ಇಲಾಖೆಗೆ ಸಾಗಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.