ETV Bharat / state

ಎಂಬಿ ಪಾಟೀಲ್‌ರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಿದ್ರೆ ಕೆಲವರು ಕಾಂಗ್ರೆಸ್​ ಸೇರಲಿದ್ದಾರೆ: ಸಚಿವ ಸುಧಾಕರ್​​

author img

By

Published : Aug 18, 2022, 8:21 PM IST

ಕಾಂಗ್ರೆಸ್​ ನಾಯಕರಾದ ಎಂ ಬಿ ಪಾಟೀಲ್ ಅವರಿಗೆ ಸಿಎಂ ಅಭ್ಯರ್ಥಿಯಾಗಲು ಅರ್ಹತೆ ಇಲ್ಲವಾ ಎಂದು ಆರೋಗ್ಯ ಸಚಿವ ಡಾ ಕೆ‌ ಸುಧಾಕರ್ ಕೇಳಿದ್ದಾರೆ.

declare-the-mb-patil-as-cm-candidate-says-minister-k-sudhakar
ಎಂಬಿ ಪಾಟೀಲ್‌ರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಕೆಲವರು ಕಾಂಗ್ರೆಸ್​ ಸೇರಲಿದ್ದಾರೆ: ಸಚಿವ ಸುಧಾಕರ್​​

ಚಿಕ್ಕಬಳ್ಳಾಪುರ: ಕಾಂಗ್ರೆಸ್ ನಾಯಕ ಎಂ ಬಿ ಪಾಟೀಲ್​ ನನ್ನ ಸ್ನೇಹಿತರು. ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರು ಎಂ ಬಿ ಪಾಟೀಲ್​ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ. ಬೇಕಾದರೆ ಆಗ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ಆರೋಗ್ಯ ಸಚಿವ ಡಾ ಕೆ‌ ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ಮುಖ್ಯಮಂತ್ರಿ ಮಾಡಿ ತುಂಬಾ ದಿನಗಳೇ ಆಗಿದೆ. ವೀರೇಂದ್ರ ಪಾಟೀಲ್ ಅವರ ಕಾಲಕ್ಕೆ ಸಿಎಂ ಲಿಂಗಾಯತ ಮುಗಿದು ಹೋಗಿದೆ. ಈಗ ಎಂ ಬಿ ಪಾಟೀಲ್ ಮುಂದಿನ ಸಿಎಂ ಅಭ್ಯರ್ಥಿ ಅಂತ ಘೋಷಿಸಲು ರಾಹುಲ್ ಗಾಂಧಿ ಅವರಿಗೆ ಹೇಳೋಕೆ ಹೇಳಿ. ಎಂ ಬಿ ಪಾಟೀಲ್ ಅವರಿಗೆ ಸಿಎಂ ಅಭ್ಯರ್ಥಿಯಾಗಲು ಅರ್ಹತೆ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಬಿ ಎಸ್​ ಯಡಿಯೂರಪ್ಪನವರನ್ನು ಬಿಜೆಪಿಗೆ ಯಾವ ರೀತಿ ನಡೆಸಿಕೊಳ್ಳಬೇಕೆಂದು ಗೊತ್ತಿದೆ. ಬಿಎಸ್​ವೈ ಮಾರ್ಗದರ್ಶನದಲ್ಲಿ ಇಡೀ ದೇಶದಲ್ಲಿ ಮಾದರಿಯಾಗುವಂತೆ ಪಕ್ಷ ಸಂಘಟನೆ ಮಾಡುತ್ತೇವೆ. ಸರ್ವೋಚ್ಛ ನಾಯಕ ಬಿಎಸ್​ವೈ ಗೌರವಕ್ಕೆ ಕುಂದು ಕೊರತೆ ಬಾರದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಮೆಡಿಕಲ್ ಕಾಲೇಜಿನ ಪ್ರಗತಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಜನವರಿಯ ಸಂಕ್ರಾಂತಿಗೆ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಉದ್ಘಾಟನೆ ಖಚಿತವಾಗಲಿದೆ. ಹಾವೇರಿ ಯಾದಗಿರಿ, ಚಿಕ್ಕಬಳ್ಳಾಪುರ ,ಚಿಕ್ಕಮಗಳೂರಿನಲ್ಲಿ ಇನ್ನೂ ಪೂರ್ಣವಾಗಬೇಕಿದೆ ಎಂದರು.

ಶಿವಾಜಿನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಉದ್ಘಾಟನೆ ಮಾಡಿದ್ದೇವೆ. ಆದರೆ ನಿರಂತರ ಮಳೆಯಿಂದ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿತ್ತು. ಇದರ ಹಿನ್ನೆಲೆಯಲ್ಲಿ ಈಗ ಕಾಮಗಾರಿ ವೇಗ ಹೆಚ್ಚಿಸಲು ಸಭೆ ನಡೆಸಲಾಗಿದೆ. ಕಾಮಗಾರಿ ಗುಣಮುಟ್ಟದಲ್ಲಿ ಯಾವುದೇ ರಾಜಿ ಇರುವುದಿಲ್ಲ ಎಂದು ಸ್ಪಷ್ಪಪಡಿಸಿದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಬಿಗ್ ಎಲೆಕ್ಷನ್ ಸ್ಟ್ರಾಟಜಿ: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಹೈಕಮಾಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.