ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವರ ತಂದೆ ಹಾಗೂ ಮನೆಗೆಲಸಗಾರನಿಗೂ ಸೋಂಕು ಧೃಡಪಟ್ಟ ಬೆನ್ನಲೇ ಇಂದು ಸಚಿವರ ಪತ್ನಿ ಹಾಗೂ ಮಗಳಿಗೂ ಸೋಂಕು ಧೃಡಪಟ್ಟಿರುವುದು ಖಚಿತವಾಗಿದೆ.

ಕಳೆದ ದಿನವಷ್ಟೇ ಯಾರ ಸಂಪರ್ಕವಿಲ್ಲದ ತಂದೆ ಹಾಗೂ ಮನೆಗೆಲಸಗಾರನಿಗೂ ಸೋಂಕು ಧೃಪಟ್ಟಿರುವುದಾಗಿ ಟ್ವಿಟರ್ನಲ್ಲಿ ತಿಳಿಸಿದ ಸಚಿವ ಕುಟುಂಬಸ್ಥರ ವರದಿಗಾಗಿ ಕಾಯುತ್ತಿರುವುದಾಗಿ ಪೋಸ್ಟ್ ಮಾಡಿದ್ದರು. ಸದ್ಯ ಇಂದು ಪತ್ನಿ ಹಾಗೂ ಮಗಳಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಇಬ್ಬರು ಗಂಡು ಮಕ್ಕಳು ಹಾಗೂ ಸಚಿವರಿಗೆ ನೆಗೆಟಿವ್ ವರದಿ ಬಂದಿದೆ. ಇದರ ಕುರಿತು ನಮ್ಮೆಲ್ಲರ ಒಳತಿಗಾಗಿ ಪ್ರಾರ್ಥಿಸಿದ ಮತ್ತು ಶುಭಕೋರಿದ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆಂದು ಟ್ವೀಟ್ ಮಾಡಿದ್ದಾರೆ.
ಇನ್ನೂ ನಿನ್ನೆಯಷ್ಟೇ ಆರೋಗ್ಯ ಇಲಾಖೆ ಸಚಿವರ ಮನೆಯಲ್ಲಿದ್ದ ಕೆಲಸಗಾರರು ಸೇರಿದಂತೆ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ ವೈದ್ಯಕೀಯ ಶಿಕ್ಷಣ ಸಚಿವರ ಕುಟುಂಬಸ್ಥರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ರಾಜ್ಯದ ಜನತೆಯಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.