ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ತಾಲೂಕಿನ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮ ಚಾಣಾಕ್ಷತೆಯನ್ನು ಅಭಿವೃದ್ಧಿ ಪರವಾಗಿ ತೋರಿದ್ದರೆ, ಗ್ರಾಮಗಳು ಸುಭಿಕ್ಷವಾಗುತ್ತಿದ್ದವು. ಬದಲಾಗಿ ಹಣ ಕೊಡುವವರ, ಬಲಾಢ್ಯರ ಪರವಾಗಿ ಆಡಳಿತ ಪಕ್ಷದ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ.

ಕೆಲವು ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಕೆಲವರಿಗೆ ಮೂರ್ನಾಲ್ಕು ವರ್ಷಗಳಾದರೂ ಶೌಚಾಲಯ ನಿರ್ಮಿಸಿದ ಅನುದಾನ ಬಿಡುಗಡೆ ಮಾಡದೇ ಪೀಡಿಸುತ್ತಿದ್ದಾರೆ. ಮತ್ತೆ ಕೆಲವರು ಗ್ರಾಮ ಪಂಚಾಯತ್ ಕೇಂದ್ರಗಳಿಗೆ ಓಡಾಡಿ ಸುಸ್ತಾಗಿ, ಇವರ ಸಹವಾಸವೇ ಬೇಡವೆಂದು ಅಷ್ಟೋ, ಇಷ್ಟೋ ಹಣ ಕೊಟ್ಟು ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ. ದುಡ್ಡು ಕೊಟ್ಟರೆ ಪಂಚಾಯತ್ ಕಚೇರಿಗಳಲ್ಲಿ ಕೆಲ ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್ ಮತ್ತು ಪಿಡಿಒಗಳು ಸುಲಭವಾಗಿ ಕೆಲಸ ಮಾಡಿಕೊಡುತ್ತಾರೆ ಎಂಬ ಆರೋಪಗಳಿವೆ.


ಬಾಗೇಪಲ್ಲಿ ತಾಲೂಕಿನ ಸೋಮನಾಥಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿನ್ನಗಾನಪಲ್ಲಿ ಗ್ರಾಮದ ಒಂದೇ ಪಡಿತರ ಚೀಟಿ BGPR00121337ಯ ಹೆಸರಲ್ಲಿ 2016ನೇ ಸಾಲಿನ ಅಕ್ಟೋಬರ್ 14 ರಿಂದ 2017ನೇ ಸಾಲಿನ ಡಿಸೆಂಬರ್ 12ರವರೆಗೆ 3 ಶೌಚಾಲಯಗಳನ್ನು ನಿರ್ಮಿಸಿರುವಂತೆ ಬಿಲ್ ಮಾಡಿಕೊಡಲಾಗಿದೆ. ರಾಜಣ್ಣ, ಸಿ.ಜಿ ರಾಜಣ್ಣ, ವೆಂಕಟಲಕ್ಷ್ಮಮ್ಮ ಎಂಬುವರ ಹೆಸರಲ್ಲಿ ಶೌಚಾಲಯ ನಿರ್ಮಿಸಿರುವಂತೆ ಬಿಲ್ ಮಾಡಿಕೊಡಲಾಗಿದೆ ಎಂದು ಯುವ ಸಮಾಜ ಚಿಂತಕ ಡಿ.ವಿ. ರಮೇಶ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ.. ಮಂಡ್ಯದಲ್ಲಿ ದುರಂತ