ಚಿಕ್ಕಬಳ್ಳಾಪುರ: ಬೈಕ್ ಸವಾರನ ನಿಯಂತ್ರಣ ತಪ್ಪಿ ತಲೆಗೆ ಪೆಟ್ಟಾಗಿ ನೋವಿನಿಂದ ನರಳುತ್ತಿದ್ದರೂ ನೆರೆದಿದ್ದ ಜನ ಸ್ಪಂದಿಸದೆ ಆ್ಯಂಬುಲೆನ್ಸ್ಗೆ ಕಾದು ಕುಳಿತು ಮಾನವೀತೆ ಮರೆತ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬಡ್ರೇಪಾಳ್ಯದ ಬಳಿ ನಡೆದಿದೆ.
ಅಪಘಾತವಾಗಿ ಒಂದು ಗಂಟೆಯಿಂದ ವ್ಯಕ್ತಿ ನೋವಿನಲ್ಲಿ ನರಳುತ್ತಿದ್ದರೂ ಆಸ್ಪತ್ರೆಗೆ ಕರೆದೊಯ್ಯಲು ಹಿಂದೇಟು ಹಾಕಿ, ಆ್ಯಂಬುಲೆನ್ಸ್‌ಗಾಗಿ ಕಾದು ಕುಳಿತು ಮಾನವೀತೆಯನ್ನು ಮರೆತಿದ್ದಾರೆ. ಅಪಘಾತವಾದ ನಂತರ ಆ್ಯಂಬುಲೆನ್ಸ್ಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಆ್ಯಂಬುಲೆನ್ಸ್ಗೆ ಕಾದು ಕುಳಿತು ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾರೆ.