ಚಿಕ್ಕಬಳ್ಳಾಪುರ: ಕೊಲೆಯಾಗಿ 5 ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಮನೆಯಲ್ಲಿಯೇ ಮಹಿಳೆ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಗೌರಿಬಿದನೂರು ನಗರದ ಗಂಗಾನಗರದ ಮನೆಯಲ್ಲಿ ಮೃತ ಪಟ್ಟ ಮಹಿಳೆಯನ್ನು ಲಕ್ಷ್ಮಿದೇವಮ್ಮ (43) ಎಂದು ತಿಳಿದು ಬಂದಿದೆ. ಸದ್ಯ ಮೃತಳ ಗಂಡ ಕೃಷ್ಣಪ್ಪ ಪರಾರಿ ಯಾಗಿದ್ದು ಕೊಲೆಯ ಹಿಂದೆ ಮೃತಳ ಗಂಡನ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ.
ಗೌರಿಬಿದನೂರು ತಾಲೂಕಿನ ರಾಮಚಂದ್ರಪುರ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೃಷ್ಣಪ್ಪ ಸೇವೆ ಸಲ್ಲಿಸುತ್ತಿದ್ದರು ಆದರೆ ಕಳೆದ ಮೂರು ದಿನಗಳಿಂದ ಕೃಷ್ಣಪ್ಪ ಪರಾರಿಯಾಗಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ಕಳೆದ ನಾಲ್ಕು ದಿನಗಳಿಂದ ಮೃತ ಮಹಿಳೆಯ ಮಕ್ಕಳು ತಾಯಿಯನ್ನು ಮಾತನಾಡಲು ಫೋನ್ ಕರೆ ಮಾಡಿದ್ದಾರೆ ಆದರೆ ಕರೆ ಸ್ವೀಕರಿಸದ ಹಿನ್ನೆಲೆ ಮನೆಯ ಬಳಿ ಬಂದು ನೋಡಿದ ವೇಳೆ ತಾಯಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಲಿಖಿತ ಎಂಬ ಮಗಳಿಗೆ ಮದುವೆ ಯಾಗಿದ್ದು ಎರಡನೇ ಮಗಳಾದ ಲೀಲಾ ಬೆಂಗಳೂರಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.ಇನ್ನೂ ಮನೆಯಲ್ಲಿ ಪ್ರತಿನಿತ್ಯವು ಗಂಡ ಹೆಂಡತಿಯ ಜಗಳವಾಡಿಕೊಳ್ಳುತ್ತಿದ್ದರು ಎಂದು ಪಕ್ಕದ ನಿವಾಸಿಗಳು ತಿಳಿಸಿದ್ದಾರೆ.
ಸದ್ಯ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿಎಲ್ ನಾಗೇಶ್ ಭೇಟಿ ನೀಡಿ ಪರಿಶೀಲಿಸಿದ್ದು ಗಂಡ ಕೃಷ್ಣಪ್ಪ ಕೊಲೆ ಮಾಡಿ ಪರಾರಿಯಾಗಿರಬಹುದು ಆದರಿಂದ ಈಗಾಗಲೇ ಆರೋಪಿಯ ಪತ್ತೆಗೆ ಸರ್ಕಲ್ ಇನ್ಸ್ಪೆಕ್ಟರ್ ಕೆಪಿ ಸತ್ಯನಾರಾಯಣ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು ಆರೋಪಿ ಸಿಕ್ಕ ಮೇಲೆ ಘಟನೆಯ ಸಂಪೂರ್ಣ ಮಾಹಿತಿ ತಿಳಿಯುತ್ತದೆ ಇನ್ನು ಮಗಳ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತವರಿಗೆ ಹೇಳದೆ ಹೋದ ಹೆಂಡತಿಗೆ ಬೆಂಕಿ ಹಚ್ಚಿದ ಪತಿ: ಕಳೆದ ಅಕ್ಟೋಬರ್ 2022ರಲ್ಲಿ ಈ ಘಟನೆ ನಡೆದಿತ್ತು. ಪತಿ ಯಾವುದೋ ಕಾರಣಕ್ಕಾಗಿ ಬೇರೆ ಊರಿಗೆ ತೆರಳಿದಾಗ ಪತ್ನಿ ಅಜ್ಜಿಯ ಮನೆಗೆ ಹೋಗಿದ್ದಾರೆ. ಬಳಿಕ ರಾತ್ರಿ ವೇಳೆ ಮನೆಗೆ ವಾಪಸ್ ಆದ ಪತಿಗೆ, ಪತ್ನಿ ಇಲ್ಲದಿರುವುದು ಕೋಪ ತರಿಸಿದೆ. ಬಳಿಕ ಆಕೆ ಅಜ್ಜಿಯ ಮನೆಗೆ ಹೋಗಿರಬಹುದು ಎಂದು ಭಾವಿಸಿ ಅಲ್ಲಿಗೆ ಬಂದಿದ್ದಾನೆ. ಪತ್ನಿಯನ್ನು ಅಜ್ಜಿಯ ಮನೆಯಲ್ಲಿ ಕಂಡ ಪತಿಗೆ ವಿಪರೀತ ಕೋಪ ಬಂದಿದೆ.
ತನಗೆ ಹೇಳದೇ ಇಲ್ಲಿಗೆ ಯಾಕೆ ಬಂದೆ ಎಂದು ಗದರಿದ್ದಾರೆನೆ. ಬಳಿಕ ಮನೆಗೆ ಬರಲು ಕರೆದಿದ್ದಾನೆ. ಆದರೆ, ಪತ್ನಿ ನಾಳೆ ಬರುವೆ ಎಂದು ಹೇಳಿದ್ದಾರೆ. ಇದರಿಂದ ಕ್ರೋಧಗೊಂಡ ಪತಿ, ಬಾರದಿದ್ದರೆ ಪೆಟ್ರೋಲ್ ಹಾಕಿ ಸುಡುವೆ ಎಂದು ಬೆದರಿಸಿದ್ದಾನೆ. ಇಬ್ಬರ ಮಧ್ಯೆ ವಾಗ್ವಾದ ಉಂಟಾಗಿ ಮನೆಯಲ್ಲಿದ್ದ ಪೆಟ್ರೋಲ್ ತಂದ ಪತಿ, ಪತ್ನಿಯ ಮೇಲೆ ಸುರಿದಿದ್ದಾನೆ. ಬೆಂಕಿ ಕಡ್ಡಿ ಹಚ್ಚಿ ಸುಡುವೆ ಎಂದು ಮುಂದಾದಾಗ ತಡೆಯಲು ಪತ್ನಿ ಯತ್ನಿಸಿದ್ದಾರೆ. ಈ ವೇಳೆ ಅಚಾನಕ್ಕಾಗಿ ಕಡ್ಡಿ ಹೊತ್ತಿಕೊಂಡು ಪತ್ನಿಯ ಸೀರೆಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಮಹಿಳೆ ತೀವ್ರ ಸುಟ್ಟ ಗಾಯಕ್ಕೆ ತುತ್ತಾಗಿದ್ದರು.
ಇದನ್ನೂ ಓದಿ: ಶಿವಮೊಗ್ಗ: ಹಾವು ಕಡಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗ ಬಾಲಕಿ ಸಾವು.. ಮುಗಿಲು ಮುಟ್ಟಿದ ಪೋಷಕರ ಆಕ್ರಂದನ