ETV Bharat / state

ಮಿತಿ ಮೀರಿದ ನೀರಿನ ಬವಣೆ, ನಗರಸಭೆ ಅಧಿಕಾರಿಗಳ ಚಳಿ ಬಿಡಿಸಿದ ಜಿಲ್ಲಾಧಿಕಾರಿ - ಚಿಕ್ಕಬಳ್ಳಾಪುರ

ತೀವ್ರ ನೀರಿನ ಸಮಸ್ಯೆ ಕಾಡುತ್ತಿರುವ ಕೆಲ ಗ್ರಾಮಗಳು, ನಗರಗಳಿಗೆ ಚಿಕ್ಕಬಳ್ಳಾಪುರ ಡಿಸಿ ಅನಿರುದ್ಧ್​ ಶ್ರಾವಣ್ ಭೇಟಿ ನೀಡಿದರು. ಈ ವೇಳೆ ಜನರಿಗೆ ಸರಿಯಾಗಿ ಕುಡಿಯುವ ನೀರು ಪೂರೈಸದ ನಗರಸಭೆ ಅಧಿಕಾರಿಗಳ ಚಳಿ ಬಿಡಿಸಿದರು.

ಚಿಂತಾಮಣಿ ನಗರಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಡಿಸಿ ಅನಿರುದ್ಧ್​ ಶ್ರಾವಣ್
author img

By

Published : Apr 27, 2019, 11:47 PM IST

ಚಿಕ್ಕಬಳ್ಳಾಪುರ: ಜಿಲ್ಲೆಯನ್ನು ಕೇಂದ್ರ ಸರ್ಕಾರವೇ 'ಬರಪೀಡಿತ' ಎಂದು ಗುರುತಿಸಿದೆ. ಬರ ವೀಕ್ಷಣೆಗೆಂದು ಎಲ್ಲಾ ಪಕ್ಷದ ರಾಜಕಾರಣಿಗಳು ನಾಮಕಾವಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಇವತ್ತು ಸ್ವತ: ಜಿಲ್ಲಾಧಿಕಾರಿಯೇ ಜನರ ನೆರವಿಗೆ ಧಾವಿಸಿ ಅಹವಾಲು ಆಲಿಸಿದರು.

ಜೀವಜಲವಿಲ್ಲದೆ ಮತದಾನವನ್ನೇ ಬಹಿಷ್ಕರಿಸಿದ ಗ್ರಾಮಗಳನ್ನು ಓಲೈಕೆ ಮಾಡಿದ ಜಿಲ್ಲಾಧಿಕಾರಿಗಳು, ಇಂದು ಜಿಲ್ಲೆಯ ಹಲವು ಗ್ರಾಮ ಹಾಗೂ ನಗರಗಳಿಗೆ ಭೇಟಿ ಕೊಟ್ಟರು. ಚಿಂತಾಮಣಿ ನಗರ ಭಾಗದಲ್ಲಿ ನೀರಿನ ಸಮಸ್ಯೆ ಸೇರಿದಂತೆ, ಚರಂಡಿಗಳ ಸ್ವಚ್ಛತೆ, ಕಸದ ರಾಶಿ ಕುರಿತು ಈಗಾಗಲೇ ಹಲವು ದೂರುಗಳು ನಗರಸಭೆ ಅಧಿಕಾರಿಗಳ ವಿರುದ್ಧ ಕೇಳಿ ಬಂದಿದ್ದವು. ಈ ವೇಳೆ ಡಿಸಿ ಅನಿರುದ್ಧ್​ ಶ್ರಾವಣ್ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಿಂತಾಮಣಿ ನಗರಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಡಿಸಿ ಅನಿರುದ್ಧ್​ ಶ್ರಾವಣ್

ನಗರದ ಆಶ್ರಯ ಬಡಾವಣೆ ಹಾಗೂ ವೆಂಕಟಗಿರಿ ಕೋಟೆಯ ನಿವಾಸಿಗಳು ವಾರ್ಡ್​ಗಳಲ್ಲಿನ ತೊಂದರೆಗಳ ಬಗ್ಗೆ ವಿವರಿಸುತ್ತಾ ಅಧಿಕಾರಿಗಳ ಅಸಮಾಧಾನ ಪ್ರದರ್ಶಿಸಿದರು. ವಾರ್ಡ್​ಗಳಲ್ಲಿ ನಗರಸಭೆ ಅಧಿಕಾರಿಗಳು ಸ್ವಚ್ಛತೆ ಮಾಡುವುದರಲ್ಲಿ ವಿಫಲರಾಗಿದ್ದು, ಸೂಕ್ತ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ ಎಂದು ದೂರಿದರು.

ಅಧಿಕಾರಿಗಳಿಗೆ ಈಗಾಗಲೇ ಸಾಕಷ್ಟು ಬಾರಿ ತಾಕೀತು ಕೊಟ್ಟರೂ ಉಪಯೋಗವಾಗದ ಕಾರಣ, ನಗರಸಭೆ ಅಧಿಕಾರಿಗಳಾದ ಚಕ್ರಪಾಣಿ ಹಾಗೂ ಉಮಾಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಸಮಯಕ್ಕೆ ಸರಿಯಾಗಿ ವಾರ್ಡುಗಳಿಗೆ ನೀರು ಸರಬರಾಜು ಮಾಡಬೇಕು ಹಾಗೂ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ನಗರ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಇಲ್ಲಿ ಟ್ಯಾಂಕರ್​ಗಳ ಮೂಲಕ ನೀರು ಸಾಗಾಣಿಕೆ ಮಾಡಲಾಗುತ್ತಿದೆ. ಸದ್ಯ ನಗರದ ಸುತ್ತಲಿನ ಕೆರೆಗಳಲ್ಲಿ ತ್ಯಾಜ್ಯಗಳನ್ನು ಸುರಿದ್ದಿದ್ದು ತೊಂದರೆ ಉಂಟಾಗುತ್ತಿದೆ. ಹೂಳೆತ್ತುವ ಕಾರ್ಯವನ್ನು ನಡೆಸಬೇಕಾಗಿದೆ. ಸದ್ಯ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದು ಸಾರ್ವಜನಿಕರಿಗೆ ಭರವಸೆ ಕೊಟ್ಟರು.

Intro:ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕೇಂದ್ರ ಸರ್ಕಾರವೇ ಬರಪೀಡಿತ ಜಿಲ್ಲೆಯೆಂದು ಗುರುತ್ತಿಸಿದೆ.ಇನ್ನೂ ಬರ ವೀಕ್ಷಣೆಗೆಂದು ಎಲ್ಲಾ ಪಕ್ಷದ ರಾಜಕಾರಣಿಗಳು ನಾಮಕ ವ್ಯವಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚುನಾವಣೆಯಾದ ನಂತರ ಅವರ ಕೆಲಸ ಕಾರ್ಯಗಳಲ್ಲಿ ಬ್ಯೂಸಿಯಾಗಿದ್ದಾರೆ.

ಒಂದು ಕಡೆ ನೀರಿಲ್ಲದೆ ಮತದಾನವನ್ನು ತ್ಯಜಿಸಿದ ಗ್ರಾಮಗಳನ್ನು ಓಲೈಕೆ ಮಾಡಿದ ಜಿಲ್ಲಾಧಿಕಾರಿಗಳು ಇಂದು ಜಿಲ್ಲೆಯ ಹಲವು ಗ್ರಾಮ ಹಾಗೂ ನಗರಗಳಿಗೆ ಬೇಟಿ ನೀಡಿದ್ದಾರೆ.

ಚಿಂತಾಮಣಿ : ನಗರ ಭಾಗದಲ್ಲಿ ನೀರಿನ ಸಮಸ್ಯೆ ಸೇರಿದಂತೆ ,ಚರಂಡಿಗಳು ಸ್ವಚ್ಛತೆ .ಕಸದ ರಾಶಿ ಕುರಿತು ಈಗಾಗಲೇ ಹಲವು ದೂರುಗಳು ನಗರಸಭೆ ಅಧಿಕಾರಿಗಳ ವಿರುದ್ಧ ಕೇಳಿ ಬರುತ್ತಿದ್ದವು.

Body:ಸದ್ಯ ಇಂದು ಚಿಂತಾಮಣಿ ನಗರಕ್ಕೆ ಜಿಲ್ಲಾ ಅಧಿಕಾರಿಗಳಾದ ಅನಿರುದ್ಧ ಶ್ರಾವಣ್ ಭೇಟಿ ಕೊಟ್ಟು ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.ಇನ್ನೂ ನಗರದ ಆಶ್ರಯ ಬಡಾವಣೆ ಹಾಗೂ ವೆಂಕಟಗಿರಿ ಕೋಟೆಯ ನಿವಾಸಿಗಳು ವಾರ್ಡ್ ಗಳಲ್ಲಿನ ತೊಂದರೆಗಳ ಬಗ್ಗೆ ವಿವರಿಸುತ್ತಾ ಅಧಿಕಾರಿಗಳ ವಿರುದ್ದ ಸಾಕಷ್ಟು ದೂರನ್ನು ನೀಡಿದ್ದಾರೆ. ವಾರ್ಡುಗಳಲ್ಲಿ ನಗರಸಭೆ ಅಧಿಕಾರಿಗಳು ಸ್ವಚ್ಛತೆ ಮಾಡುವುದರಲ್ಲಿ ವಿಫಲರಾಗಿದ್ದು ಸೂಕ್ತ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ ಎಂದು ದೂರಿದ್ದಾರೆ.

ಅಧಿಕಾರಿಗಳಿಗೆ ಈಗಾಗಲೇ ಸಾಕಷ್ಟು ಬಾರೀ ತಾಕೀತು ಕೊಟ್ಟರು ಉಪಯೋಗವಾಗದ ಕಾರಣ ನಗರಸಭೆ ಅಧಿಕಾರಿಗಳಾದ ಚಕ್ರಪಾಣಿ ಹಾಗೂ ಉಮಾಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ವಾರ್ಡುಗಳಿಗೆ ನೀರು ಸರಬರಾಜು ಮಾಡಿ ಹಾಗೂ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿ ಎಂದು ಎಚ್ಚರಿಕೆ ನೀಡಿದರು .

ಇನ್ನೂ ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ನಗರ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಟ್ಯಾಂಕರ್ ಗಳ ಮೂಲಕ ಸಾಗಣಿಕೆ ಮಾಡಲಾಗುತ್ತಿದೆ.ಸದ್ಯ ನಗರದ ಸುತ್ತಲಿನ ಕೆರೆಗಳಲ್ಲಿ ತ್ಯಾಜ್ಯಗಳನ್ನು ಸುರಿದ್ದಿದ್ದು ತೊಂದರೆ ಉಂಟಾಗುತ್ತಿದೆ.ಹುಳೆತ್ತುವ ಕಾರ್ಯವನ್ನು ನಡೆಸಬೇಕಾಗಿದೆ.ಸದ್ಯ ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ಹೇಳಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪಿ.ಡಿ .ನೆಟ್ ರಾಜ್ ಪೌರಾಯುಕ್ತರಾದ ಹರೀಶ್ ಸೇರಿದಂತೆ ಇನ್ನಿತರ ನಗರಸಭೆ ಅಧಿಕಾರಿಗಳು ಭಾಗಿಯಾಗಿದ್ದರು.

(ಜಿಲ್ಲಾಧಿಕಾರಿಗಳ ಬೈಟ್,ಹಾಗೂ ಕ್ಲಿಪ್ಸ್)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.