ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು ಅಂತಿಮವಾಗಿ ಯಾವ ಅಭ್ಯರ್ಥಿಯ ಮೊಬೈಲ್ ಸ್ವಿಚ್ ಆಫ್ ಆಗುತ್ತೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ ಎಂದು ಭವಿಷ್ಯ ನುಡಿದರು.
ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಡಾ.ಕೆ. ಸುಧಾಕರ್, ಬಿಜೆಪಿಯನ್ನು ದೂರ ಇಡೋ ಮಾತನಾಡ್ತಾರೆ. ಅದೇ ಬಿಜೆಪಿ ಜೊತೆ ಸೇರಿ 20 ತಿಂಗಳ ಕಾಲ ಸಮ್ಮಿಶ್ರ ಸರ್ಕಾರ ರಚಿಸಿದ್ದರು. ಬಳಿಕ ಒಪ್ಪಂದದಂತೆ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡದೆ ಮೋಸ ಮಾಡಿದ್ದರು. ಅವರಿಗೆ ತತ್ವ ಸಿದ್ಧಾಂತ, ನಿಷ್ಠೆ ಇಲ್ಲ. ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುತ್ತಾರೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಇದೆ. ಯಾವ ಅಭ್ಯರ್ಥಿಯ ಮೊಬೈಲ್ ಕೊನೆಯಲ್ಲಿ ಸ್ವಿಚ್ ಆಫ್ ಆಗುತ್ತೆ ಅನ್ನೋದು ಗೊತ್ತಿಲ್ಲ. ಇಬ್ಬರ ಪೈಕಿ ಒಬ್ಬ ಅಭ್ಯರ್ಥಿಯ ಮೊಬೈಲ್ ಸ್ವಿಚ್ ಆಫ್ ಆಗಬಹುದು. ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ಚುನಾವಣಾ ಪ್ರಚಾರದಲ್ಲಿ ನಟಿ ಹರಿಪ್ರಿಯಾ ಪಾಲ್ಗೊಂಡಿದ್ದರು.