ಚಿಕ್ಕಬಳ್ಳಾಪುರ: ಬಯಲು ಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಎ.ಎಸ್.ಐ ರಾಷ್ಟ್ರಪತಿ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದು ಜಿಲ್ಲಾ ವರಿಷ್ಠಾಧಿಕಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಸ್ವತಂತ್ರ ದಿನಾಚರಣೆ ಹಿನ್ನಲೇ ಪ್ರತಿ ವರ್ಷ ನೀಡಲಾಗುತ್ತಿರುವ ರಾಷ್ಟ್ರಪತಿ ಪ್ರಶಸ್ತಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, 18 ಜನ ಅಧಿಕಾರಿಗಳಲ್ಲಿ ಚಿಕ್ಕಬಳ್ಳಾಪುರದ ಎಸ್‌ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿತ್ತಿರುವ ಎ.ಎಸ್.ಐ ನಂಜುಂಡಯ್ಯ ರವರು ಈ ಬಾರಿಯ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ಇನ್ನೂ ದಕ್ಷ ಮತ್ತು ಪ್ರಾಮಾಣಿಕ ಸೇವೆಗಾಗಿ ಈ ಹಿಂದೆ ಮುಖ್ಯಮಂತ್ರಿಗಳಿಂದ ಗೌರವವನ್ನು ಪಡೆದುಕೊಂಡಿದ್ದ ನಿಷ್ಟಾವಂತ ಎ.ಎಸ್.ಐ ನಂಜುಂಡಯ್ಯ ನವರಿಗೆ ಈ ಬಾರೀ ರಾಷ್ಟ್ರಪತಿ ಗೌರವ ದೊರೆತ್ತಿದ್ದು ಜಿಲ್ಲಾವರಿಷ್ಠಾಧಿಕಾರಿ ಹಾಗೂ ಸಹ ಅಧಿಕಾರಿಗಳು ಹಾಗೂ ಜಿಲ್ಲೆಯ ಜನತೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನೂ ಪ್ರತಿನಿತ್ಯ ಹಸನ್ಮುಖಿ ಹಾಗೂ ಸದಾ ಹುಮ್ಮಸ್ಸಿನಿಂದ ಸೇವೆಗೆ ಹಾಜರಾಗುತ್ತಿದ್ದ ನಂಜುಂಡಯ್ಯ ಇಡೀ ಇಲಾಖೆಯಲ್ಲಿ ಹಿರಿಯರು, ಕಿರಿಯರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಸದ್ಯ ಪ್ರಶಸ್ತಿ ಘೋಷಣೆ ಇಡೀ ಇಲಾಖೆಗೆ ಸಂದ ಗೌರವ ಎಂದು ನಂಜುಂಡಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.