ಬಾಗೇಪಲ್ಲಿ: ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ದೃಶ್ಯ ಮಾಧ್ಯಮದ ವರದಿಗಾರರು ಮತ್ತು ಕ್ಯಾಮರಾಮೆನ್‍ಗಳ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ಬಾಗೇಪಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಎಲ್ಲಾದರೂ ದೊಂಬಿ, ಗಲಭೆ, ಗಲಾಟೆಗಳು ನಡೆದಾಗ ಮಾಧ್ಯಮದವರು ಸ್ಥಳಕ್ಕೆ ತೆರಳಿ ನಿರ್ಭಯವಾಗಿ ವರದಿ ಮಾಡುವ ವಾತಾವರಣವೇ ಇಲ್ಲದಂತಾಗಿದೆ. ಮಾಧ್ಯಮದವರನ್ನು ಗುರಿಯಾಗಿಸಿಕೊಂಡು ವಿನಾಕಾರಣ ಹಲ್ಲೆ ನಡೆಸುತ್ತಿರುವವರನ್ನು ಕೂಡಲೇ ಬಂಧಿಸಿ ಕಾನೂನು ರೀತಿಯಲ್ಲಿ ಶಿಕ್ಷಿಸುವಂತೆ ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು. ಜೊತೆಗೆ ಹಲ್ಲೆಗೊಳಗಾಗಿರುವ ಮಾಧ್ಯಮದವರಿಗೆ ಪರಿಹಾರ ನೀಡಿ ರಕ್ಷಣೆಗೆ ಮುಂದಾಗುವಂತೆಯೂ ತಿಳಿಸಿದರು.