ETV Bharat / state

ಬಿರುಕು ಬಿಟ್ಟ ಗೋಡೆ, ಸೋರುವ ಛಾವಣಿ: ಭಯದ ನೆರಳಲ್ಲೇ ಮಕ್ಕಳಿಗೆ ಪಾಠ - ಬಿರುಕು ಬಿಟ್ಟ ಗೋಡೆ

ಶಿಕ್ಷಣ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕಾಳಜಿ ತೋರದ ಪರಿಣಾಮ ಪ್ರಾಥಮಿಕ ಶಾಲೆ ಇದ್ದು ಇಲ್ಲದಂತಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

Bad condition Of Digavapally Govt Senior Primary School
ದಿಗವಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರವಸ್ಥೆ
author img

By

Published : Dec 22, 2022, 1:29 PM IST

ಬಿರುಕು ಬಿಟ್ಟ ಗೋಡೆ, ಸೋರುವ ಛಾವಣಿ: ಭಯದ ನೆರಳಲ್ಲೇ ಮಕ್ಕಳಿಗೆ ಪಾಠ

ಚಿಂತಾಮಣಿ: ಬಿರುಕು ಬಿಟ್ಟ ಗೋಡೆಗಳು, ಯಾವುದೇ ಸಂದರ್ಭದಲ್ಲಿ ಕೆಳಗೆ ಬೀಳಬಹುದಾದಂತಹ ಛಾವಣಿ, ಯಾವಾಗ ಕುಸಿಯಬಹುದೆಂಬ ಆತಂಕದಲ್ಲಿಯೇ ಇಲ್ಲಿ ಮಕ್ಕಳಿಗೆ ಪಾಠ ನಡೆಯುತ್ತದೆ. ಚಿಂತಾಮಣಿ ತಾಲೂಕಿನ ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ದಿಗವಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರವಸ್ಥೆಯ ಚಿತ್ರಣ ಇದು.

ಇಲ್ಲಿ ಒಂದರಿಂದ ಐದನೇ ತರಗತಿವರೆಗೆ ಸುಮಾಸು 20 ವಿದ್ಯಾರ್ಥಿಗಳಿದ್ದಾರೆ. ತರಗತಿ ತಕ್ಕಂತೆ ಶಾಲಾ ಕೊಠಡಿಗಳಿಲ್ಲ, ಇರುವ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಯಾವುದೇ ಸಂದರ್ಭದಲ್ಲಿ ನೆಲಕಚ್ಚುವ ಸಾಧ್ಯತೆ ಇದೆ. ತೀರಾ ಬಡಮಕ್ಕಳು ಮಾತ್ರ ಈ ಶಾಲೆಯಲ್ಲಿ ಪ್ರವೇಶ ಪಡೆದಿದ್ದು, ಪಾಲಕರು ಆತಂಕದಲ್ಲಿಯೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ ಎಂದು ಗ್ರಾಮಸ್ಥರಾದ ಮಂಜುಳಾ, ಶಂಕರ್, ಎಸ್​ಡಿಎಂಸಿ ಅಧ್ಯಕ್ಷ ನರಸಿಂಹಪ್ಪ ತಿಳಿಸಿದ್ದಾರೆ.

ಸ್ವಲ್ಪ ಮಳೆ ಬಂದರೆ ಸಾಕು ಛಾವಣಿ ಸೋರುವುದರಿಂದ ಮಕ್ಕಳು ಕುಳಿತುಕೊಳ್ಳಲು ಜಾಗ ಇಲ್ಲದ ಸ್ಥಿತಿ. ಹಾಗಾಗಿ ಮಕ್ಕಳು ಮಳೆ ಬಂದರೆ ಶಾಲೆಗೆ ಬರುವುದೇ ಇಲ್ಲ. ಇದರಿಂದ ಶಿಕ್ಷಕರು ಮಾತ್ರ ಶಾಲೆಗೆ ಬಂದು ಸಮಯ ಕಳೆದು ಹೋಗಬೇಕಾಗುತ್ತದೆ. ಹೀಗೆ ಅಸಮರ್ಪಕವಾಗಿರುವ ಶಾಲೆ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಕೂಡ ಪಾಲಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಶಿಕ್ಷಣ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕಾಳಜಿ ತೋರದ ಪರಿಣಾಮ ಪ್ರಾಥಮಿಕ ಶಾಲೆ ಇದ್ದು ಇಲ್ಲದಂತಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಶಾಲೆಗೆ ನೂತನ ಕಟ್ಟಡ ನಿರ್ಮಿಸಲು ಮುಖ್ಯ ಶಿಕ್ಷಕರು ಈಗಾಗಲೇ ಮನವಿ ಮಾಡಿದ್ದಾರೆ. ಸರ್ಕಾರ ಶಿಕ್ಷಣ ಇಲಾಖೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು, ಹಲವು ಸೌಲಭ್ಯ ಕಲ್ಪಿಸಿದರೂ ಸಹ ಕೆಲ ಸರ್ಕಾರಿ ಶಾಲೆಗಳು ಮೂಲ ಸೌಲಭ್ಯದಿಂದ ವಂಚಿತವಾಗಿ ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿಯಾಗಿವೆ.

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗೆ ಹೆಚ್ಚಾಗಿ ಬಡವರು, ಹಿಂದುಳಿದ ಎಸ್‌ಸಿ, ಎಸ್‌ಟಿ ಮಕ್ಕಳೇ ದಾಖಲಾತಿಯಲ್ಲಿ ಮುಂದಿದ್ದು, ಸರ್ಕಾರ ಎಲ್ಲ ರೀತಿಯ ಮೂಲಸೌರ್ಕರ್ಯಗಳನ್ನು ಒದಗಿಸಿ ಅವರ ಕೈ ಹಿಡಿಯಬೇಕಿದೆ. ಹಾಗೂ ಕೂಡಲೇ ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ಅಭಿವೃದ್ಧಿಪಡಿಸಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಪೋಷಕರ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಜೀವ ಕೈಯಲ್ಲಿ ಹಿಡಿದು ಮಕ್ಕಳ ವಿದ್ಯಾಭ್ಯಾಸ.. ಸ್ವಾತಂತ್ರ್ಯಪೂರ್ವದ ಶಾಲೆಗೆ ಬೇಕಿದೆ ಕಾಯಕಲ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.