ಚಿಕ್ಕಬಳ್ಳಾಪುರ: ಪೌರತ್ವ ಕಾಯ್ದೆಯ ಬಗ್ಗೆ ಅರಿವು ಮೂಡಿಸಲು ನಾಳೆ ಹುಬ್ಬಳ್ಳಿಗೆ ಅಮಿತ್ ಶಾ ಬರಲಿದ್ದು, ಬೃಹತ್ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ ಎಂದು ಪರಿಸರ ಸಚಿವ ಸಿಸಿ ಪಾಟೀಲ್ ಹೇಳಿದರು.
ನಗರದ ಹೊರವಲಯದ ಡಿಸ್ಕವರಿ ವಿಲೇಜ್‌ನಲ್ಲಿ 6 ನೇ ಹಕ್ಕಿಹಬ್ಬ ಆಚರಿಸುತ್ತಿದ್ದು, ನಾಳೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪೌರತ್ವ ಕಾಯ್ದೆ ಅರಿವು ಕಾರ್ಯಕ್ರಮಕ್ಕೆ ಅಮಿತ್ ಶಾ ಬರಲಿದ್ದಾರೆ. ನಾಡಿನ ಜನತೆಗೆ ಸಿಎಎ ಕಾಯ್ದೆ ಕುರಿತ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಇನ್ನೂ ಸಚಿವ ಸಂಪುಟದ ಬಗ್ಗೆ ಮೌನ ಮುರಿದ ಸಚಿವರು, ದೊಡ್ಡವರ ವಿಷಯದ ಬಗ್ಗೆ ನಾನು ಮಾತಾನಾಡುವುದಿಲ್ಲ. ಮುಖ್ಯಮಂತ್ರಿಗಳು ಸಾಕಷ್ಟು ಬಾರಿ ಅನರ್ಹ ಶಾಸಕರಿಂದ ಅಧಿಕಾರ ಸಿಕ್ಕಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಇನ್ನೂ ಸಾಕಷ್ಟು ಜನ ರಾಜಕೀಯ ಭದ್ರತೆಯ ದೃಷ್ಟಿಯಿಂದ ಬಿಜೆಪಿ ಸೇರಲಿದ್ದಾರೆ. ಸದ್ಯ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ನೆಲೆಯಿಲ್ಲದಂತಾಗಿದೆ ಎಂದು ತಿಳಿಸಿದರು.